ಕುಂಬಳೆ: ಅಧ್ಯಾಪಕರಿಗಾಗಿ ಆಯೋಜಿಸಿದ್ದ ವಾಲಿಬಾಲ್ ಪ್ರೀಮಿಯರ್ ಲೀಗ್ ಪಂದ್ಯಾಟವು ಇತ್ತೀಚೆಗೆ ಕುಂಬಳೆ ಕಂಚಿ ಕಟ್ಟೆಯಲ್ಲಿ ನಡೆಯಿತು. ಇದರಲ್ಲಿ ಪ್ರಥಮ ಬಹುಮಾನವನ್ನು ಸ್ಮಾಶಿಂಗ್ ಮಾಸ್ಟರ್ ತಂಡ ಪಡೆದರೆ, ಮಾಸ್ಟರ್ ಸ್ಟ್ರೆಕರ್ ತಂಡವು ದ್ವಿತೀಯ ಬಹುಮಾನವನ್ನೂ, ಸ್ಪೋರ್ಟಿಂಗ್ ಟೀಚರ್ಸ್ ತಂಡ ಹಾಗೂ ರಾಯಲ್ ಟೀಚರ್ಸ್ ತಂಡವು ತೃತೀಯ ಹಾಗೂ ಚತುರ್ಥ ಬಹುಮಾನವನ್ನೂ ಪಡೆದರು.
ಮುಂಜಾನೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಆಗಸ್ಟಿನ್ ಬರ್ನಾಡ್ ಉದ್ಘಾಟಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವಕ ಸತೀಶ್ ಕಂಚಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುರುರಾಜ್ ಕಂಚಿಕಟ್ಟೆ, ಸಂಘಟಕರಾದ ದಾಮೋದರನ್, ಮೊಹಮ್ಮದ್ ರಫೀಕ್ ಹಾಗೂ ಪ್ರಶಾಂತ ಕುಮಾರ್ ಬಿ ಉಪಸ್ಥಿತರಿದ್ದರು. ಪೆರ್ಮುದೆ ಶಾಲೆಯ ಮುಖ್ಯೋಪಾಧ್ಯಾಯ ಸದಾಶಿವ ಕೆ ಕೆ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.