ಮಾಸ್ಕೋ: ಜಗತ್ತಿನ ದೊಡ್ಡಣ್ಣ ಅಮೆರಿಕಾ ಯುದ್ಧಪೀಡಿತ ಉಕ್ರೇನ್ ನ ನಡುನೀರಿನಲ್ಲಿ ಕೈಬಿಟ್ಟ ನಂತರ ಕಂಗಾಲಾಗಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತುಕತೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಆಹ್ವಾನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕ್ರೆಮ್ಲಿನ್ ಉಕ್ರೇನ್‌ನೊಂದಿಗೆ ಮಾತುಕತೆಗಾಗಿ ಪುಟಿನ್ ಮಿನ್ಸ್ಕ್‌ಗೆ ನಿಯೋಗವನ್ನು ಕಳುಹಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯೆಯಾಗಿ, ವ್ಲಾಡಿಮಿರ್ ಪುಟಿನ್ ಅವರು ರಕ್ಷಣಾ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಅಧ್ಯಕ್ಷೀಯ ಆಡಳಿತದ ಪ್ರತಿನಿಧಿಗಳ ಮಟ್ಟದಲ್ಲಿ ರಷ್ಯಾದ ನಿಯೋಗವನ್ನು ಮಿನ್ಸ್ಕ್ಗೆ ಕಳುಹಿಸಲು ಸಿದ್ಧರಾಗಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸಿದ ಒಂದು ದಿನದ ನಂತರ ಡಿಮಿಟ್ರಿ ಪೆಸ್ಕೋವ್ ಹೇಳಿದರು.
ಕ್ರೆಮ್ಲಿನ್ ಮತ್ತು ಬೆಲರೂಸಿಯನ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಪ್ರಕಾರ, 'ರಷ್ಯಾದ ಒಕ್ಕೂಟ ಮತ್ತು ಉಕ್ರೇನ್‌ನ ಸಮಾಲೋಚನಾ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲಾ ಪರಿಸ್ಥಿತಿಗಳನ್ನು ರಚಿಸಲು ಮಿನ್ಸ್ಕ್ ಸಿದ್ಧವಾಗಿದೆ ಎಂದು ಭರವಸೆ ನೀಡಿದರು.
ಕಳೆದ ವರ್ಷದ ಕೊನೆಯಲ್ಲಿ ಉಕ್ರೇನ್, ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ಉಕ್ರೇನ್‌ನ ಗಡಿಯಲ್ಲಿ ಹತ್ತಾರು ಸಾವಿರ ಸೈನಿಕರನ್ನು ರಷ್ಯಾ ಸಂಗ್ರಹಿಸಿದೆ ಎಂದು ಆರೋಪಿಸಿದಾಗ ಉದ್ವಿಗ್ನತೆಗಳು ಉಲ್ಬಣಗೊಳ್ಳಲು ಪ್ರಾರಂಭಿಸಿದವು.
ಪಶ್ಚಿಮದ ನಿರ್ಬಂಧಗಳ ಬೆದರಿಕೆಗಳನ್ನು ಧಿಕ್ಕರಿಸಿ, ಈ ವಾರದ ಆರಂಭದಲ್ಲಿ ಮಾಸ್ಕೋ ಅಧಿಕೃತವಾಗಿ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ರಾಜ್ಯಗಳಾಗಿ ಗುರುತಿಸಿತ್ತು. ನಂತರ ಗುರುವಾರ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಪ್ರಾರಂಭವಾಯಿತು.