ತಿರುವನಂತಪುರ: ಎಸ್‌ಡಿಪಿಐಗೆ ಅಧಿಕೃತ ಪೊಲೀಸ್ ಮಾಹಿತಿ ಸೋರಿಕೆ ಮಾಡಲು ಕಾರಣರಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಕರಿಮನ್ನೂರು ಠಾಣೆಯ ಪೊಲೀಸ್ ಅಧಿಕಾರಿ ಅನಾಸ್ ಪಿಕೆ ಅವರನ್ನು ಇಡುಕ್ಕಿ ಎಸ್ಪಿ ವಜಾಗೊಳಿಸಿದ್ದಾರೆ.
ಈ ಹಿಂದೆ ಅನಾಸ್ ತೊಡುಪುಳದಲ್ಲಿ ಸುಮಾರು 150 ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಾಹಿತಿಯನ್ನು ಎಸ್‌ಡಿಪಿಐ ಕಾರ್ಯಕರ್ತರಿಗೆ ಸೋರಿಕೆ ಮಾಡಿರುವುದು ಪತ್ತೆಯಾಗಿತ್ತು. ಅನಾಸ್ ವಾಟ್ಸ್ ಆ್ಯಪ್ ಮೂಲಕ ಆರ್ ಎಸ್ ಎಸ್ ಕಾರ್ಯಕರ್ತರ ಮಾಹಿತಿ ಸೋರಿಕೆ ಮಾಡಿದ್ದ.
ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಡಿವೈಎಸ್ಪಿ ಅನಾಸ್ ವಿರುದ್ಧದ ದೂರನ್ನು ದೃಢಪಡಿಸುವ ವರದಿಯನ್ನು ಸಲ್ಲಿಸಿದರು. ತನಿಖೆಯ ಭಾಗವಾಗಿ ಅನಾಸ್ ಅವರನ್ನು ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾಯಿಸಿ ಅಮಾನತುಗೊಳಿಸಲಾಗಿದೆ. ಆದರೆ ಗಂಭೀರ ತಪ್ಪು ಮಾಡಿರುವ ಅನಾಸ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂಬ ಆಗ್ರಹ ಬಲವಾಗಿತ್ತು.
ತಿಂಗಳ ಹಿಂದೆ ಫೇಸ್‌ಬುಕ್ ಪೋಸ್ಟ್ ಹೆಸರಲ್ಲಿ