ಶ್ರೀನಗರ: ಕೇಬಲ್ ಮಾದರಿಯ ರೈಲ್ವೆ ಸೇತುವೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಅಂಜಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿದ್ದು, ಈ ಮಾದರಿಯ ದೇಶದ ಮೊದಲ ಸೇತುವೆ ಇದಾಗಿದೆ. ಇದು ಫ್ರಾನ್ಸ್‍ನ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿರುವುದು ವಿಶೇಷವಾಗಿದೆ.

ಅಂಜಿ ನದಿಗೆ ಅಡ್ಡಲಾಗಿ ಚೇನಾಬ್ ಮಾದರಿಯ ಕಮಾನು ಸೇತುವೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಈ ಮೊದಲು ಯೋಜನೆ ರೂಪಿಸಿತ್ತು. ಆದರೆ ಈ ಯೋಜನೆಯ ಪ್ರಕಾರ ಕಮಾನು ನಿರ್ಮಾಣಕ್ಕೆ ಅಡೆತಡೆಗಳಿದ್ದರಿಂದಾಗಿ 2016ರ ಅಕ್ಟೋಬರ್‌ನಲ್ಲಿ ಅದನ್ನು ಕೈಬಿಟ್ಟು ಕೇಬಲ್ ಮಾದರಿಯ ಸೇತುವೆ ನಿರ್ಮಾಣದ ಯೋಜನೆ ರೂಪಿಸಲಾಗಿತ್ತು. ಇದೀಗ ಸೇತುವೆ ನಿರ್ಮಾಣದ ಕಾಮಗಾರಿ ಭರದಿಂದ ಸಾಗಿದೆ.
ಉಂಧಾಪುರ-ಶ್ರೀನಗರ-ಬಾರಾಮುಲ್ಲಾ ರೈಲು ಯೋಜನೆಯ ಭಾಗವಾಗಿ ಈ ಸೇತುವೆ ನಿರ್ಮಾಣವಾಗುತ್ತಿದೆ. 473.25 ಮೀಟರ್ ಉದ್ದವಿರುವ ಈ ಸೇತುವೆ. ನದಿಯ ಮೇಲ್ಮೈ ಪ್ರದೇಶದಿಂದ 331 ಮೀಟರ್ ಎತ್ತರ ಇರಲಿದೆ. ಒಟ್ಟು 96 ಕೇಬಲ್‍ಗಳು ಸೇತುವೆಗೆ ಆಧಾರವಾಗಿರುವಂತೆ 21.653 ಕೋಟಿ ರೂ. ವೆಚ್ಚದಲ್ಲಿ ಕೇಬಲ್‍ಗಳನ್ನು ಜೋಡಿಸಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಈ ಕುರಿತು ಕೇಂದ್ರ ರೈಲ್ವೇ ಇಲಾಖೆ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದು, ಇದು ದೇಶದ ಎಂಜಿನಿಯರಿಂಗ್ ಕ್ಷೇತ್ರದ ಹೆಮ್ಮೆ ಎಂದು ಬರೆದುಕೊಂಡಿದೆ.