ಕೋಝಿಕ್ಕೋಡ್: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ದಲಿತ ಯುವತಿಗೆ ಗಾಂಜಾ ಮತ್ತು ಡ್ರಗ್ಸ್ ನೀಡಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರೀತಿಸುವುದಾಗಿ ಹೇಳಿ ಯುವತಿಯನ್ನು ಕರೆದುಕೊಂಡು ಹೋಗಿ ಕುಕೃತ್ಯವೆಸಗಲಾಗಿದೆ.
ಫೆಬ್ರವರಿ 14 ರಂದು ಕೊಯಿಲಾಂಡಿಯಲ್ಲಿ ಈ ಘಟನೆ ನಡೆದಿದೆ. ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಶ್ಯಾಮಲಾಲ್ ಮತ್ತು ಅರುಣ್ ರಾಜ್ ಬಂಧಿತರು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.
ಪ್ರೀತಿಸುವ ನೆಪದಲ್ಲಿ ವಿವಿಧೆಡೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವ್ಯಾಲೆಂಟೈನ್ ಡೇ ಬೆಳಿಗ್ಗೆ ಮನೆಯಿಂದ ಹೊರಟ ಹುಡುಗಿ ಸಂಜೆ ಹಿಂತಿರುಗಿದಳು. ಅಂದಿನಿಂದ ಅಸ್ವಸ್ಥೆಯಾಗಿರುವುದಾಗಿ ವರದಿಯಾಗಿವೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇದಾದ ಬಳಿಕ ಕಿರುಕುಳದ ಮಾಹಿತಿ ಬಹಿರಂಗಗೊಂಡಿತು.