ಜಮ್ಮು: ಜಮ್ಮು ಮತ್ತು ಕಾಶ್ಮೀರದ ಆರ್‌ಎಸ್ ಪುರ ಸೆಕ್ಟರ್‌ನಲ್ಲಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ(ಐಬಿ) ಹಾರುತ್ತಿದ್ದ ವಸ್ತುವಿನ ಮೇಲೆ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಗುರುವಾರ ಗುಂಡಿನ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಹಾರುವ ವಸ್ತು, ಬಹುಶಃ ಡ್ರೋನ್ ಎಂದು ಶಂಕಿಸಲಾಗಿದ್ದು, ಗಡಿಯಾಚೆಯಿಂದ ಭಾರತದ ಭೂಪ್ರದೇಶಕ್ಕೆ ನುಸುಳಲು ಪ್ರಯತ್ನಿಸುತ್ತಿತ್ತು. ಅದನ್ನು ಹಿಮ್ಮೆಟ್ಟಿಸಲು ಗುಂಡಿನ ದಾಳಿ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.
ಆರ್‌ಎಸ್ ಪುರ-ಅರ್ನಿಯಾ ಸೆಕ್ಟರ್‌ನಲ್ಲಿರುವ ಅಂತರಾಷ್ಟ್ರೀಯ ಗಡಿ ಉದ್ದಕ್ಕೂ ಹಾರುವ ವಸ್ತುವೊಂದು ಪತ್ತೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಎಸ್‌ಎಫ್ ಪಡೆಗಳು ಅದರ ಮೇಲೆ 20 ಸುತ್ತು ಗುಂಡು ಹಾರಿಸಿವೆ ಎಂದು ಮೂಲಗಳು ತಿಳಿಸಿವೆ.
ಉಗ್ರರು ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಸ್ತುಗಳನ್ನು ಹಾಗೂ ಮಾದಕವಸ್ತುಗಳನ್ನು ಬೀಳಿಸಲು ಅಂತರಾಷ್ಟ್ರೀಯ ಗಡಿಯಾದ್ಯಂತ ಆಗಾಗ್ಗೆ ಡ್ರೋನ್‌ಗಳನ್ನು ಬಳಸುತ್ತಾರೆ.