HEALTH TIPS

ಕೂದಲಿಗೆ ಮೆಹಂದಿ ಹಚ್ಚುವಾಗ ಈ ಮಿಸ್ಟೇಕ್ಸ್ ಮಾಡದಿರಿ

 ಬಿಳಿ ಕೂದಲು ಮರೆ ಮಾಚಲು, ಕೂದಲಿಗೆ ಹೊಳಪು ನೀಡಲು ಹೆಚ್ಚಿನವರು ಹೆನ್ನಾ ಅಥವಾ ಮೆಹಂದಿ ಹಚ್ಚುತ್ತಾರೆ. ಮೆಹಂದಿ ಸೊಪ್ಪನ್ನು ತಂದು ಅರಿದು ಹಚ್ಚುವವರು ಕಡಿಮೆ , ಹೆಚ್ಚಿನವರು ಮಾರುಕಟ್ಟೆಯಲ್ಲಿ ದೊರೆಯುವ ಹೆನ್ನಾ ಹಚ್ಚುತ್ತಾರೆ. ಹೆನ್ನಾ ಹಚ್ಚುವಾಗ ಅದರಿಂದ ಕೂದಲಿನ ಹೊಳಪು ಹೆಚ್ಚುವುದು, ಆದರೆ ಕೆಲವೊಮ್ಮೆ ತಲೆಗೆ ಹೆನ್ನಾ ಹಚ್ಚಿದಾಗ ನಾವು ಬಯಸಿದ ಫಲಿತಾಂಶ ದೊರೆಯುವುದಿಲ್ಲ, ಅದಕ್ಕೆ ಕಾರಣವೇನು ಗೊತ್ತಾ ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳಾಗಿವೆ.

ಹೆನ್ನಾ ಬಳಸುವವರು ಹೆಚ್ಚಾಗಿ ಅದನ್ನು ಸರಿಯಾದ ರೀತಿಯಲ್ಲಿ ಮಾಡುವುದಿಲ್ಲ, ತಲೆಗೆ ಮೆಹಂದಿ ಹಚ್ಚುವಾಗ ಈ ತಪ್ಪುಗಳನ್ನು ಮಾಡದಿರಿ:

ಮೊಸರು ಜೊತೆ ಮಿಕ್ಸ್ ಮಾಡಬಾರದು

ನಮ್ಮಲ್ಲಿ ಹೆಚ್ಚಿನವರು ಹೆನ್ನಾವನ್ನು ಮೊಸರು ಜೊತೆ ಮಿಶ್ರ ಮಾಡಿ ಹಚ್ಚುತ್ತಾರೆ, ಆದರೆ ಮೆಹಂದಿಗೆ ಮೊಸರು ಮಿಶ್ರ ಮಾಡಬಾರದು. ಹೀಗೆ ಮಾಡಿದರೆ ಕೂದಲಿಗೆ ಹೆನ್ನಾದಲ್ಲಿರುವ ಪ್ರೊಟೀನ್ ದೊರೆಯುವುದಿಲ್ಲ. ಆದ್ದರಿಂದ ಹೀಗೆ ಮಾಡಬೇಡಿ.

ಹೆನ್ನಾವನ್ನು ಮಿಕ್ಸ್ ಮಾಡಿದ ತಕ್ಷಣ ಹಚ್ಚಬಾರದು ಹೆನ್ನಾವನ್ನು ಮಿಕ್ಸ್‌ ಮಾಡಿ ಕನಿಷ್ಠ 10-12 ಗಂಟೆಗಳ ಕಾಲ ಇಡಬೇಕು. ಅಷ್ಟೊ ಹೊತ್ತು ನೆನೆಸಿ ಇಡದಿದ್ದರೆ ನೀವು ಹೆನ್ನಾ ಚೆನ್ನಾಗಿಲ್ಲವೆಂದು ಹೇಳಿ ಪ್ರಯೋಜನವಿಲ್ಲ, ಏಕೆಂದರೆ ನಿಮಗೆ ಬೇಕಾದ ಫಲಿತಾಂಶ ದೊರೆಯುವುದಿಲ್ಲ.
ಹೆನ್ನಾ ಹಚ್ಚುವಾಗ ಎಣ್ಣೆಯನ್ನು ಹಚ್ಚಬೇಡಿ ತುಂಬಾ ಜನರು ತಲೆಗೆ ಹೆನ್ನಾ ಹಚ್ಚುವ ಮುನ್ನ ಎಣ್ನೆ ಹಚ್ಚುತ್ತಾರೆ. ಕೂದಲಿಗೆ ಎಣ್ಣೆ ಹಚ್ಚಿದಾಗ ಮೆಹಂದಿ ಹಚ್ಚಿದಾಗ ಕೂದಲು ಅಷ್ಟಾಗಿ ಹೀರಿಕೊಳ್ಳುವುದಿಲ್ಲ. ನೀವು ಕೂದಲಿಗೆ ಹೆನ್ನಾ ಹಚ್ಚಿ ಕೂದಲನ್ನು ತೊಳೆದು ಒಣಗಿಸಿದ ಬಳಿಕ ಎಣ್ನೆ ಹಚ್ಚುವುದು ಒಳ್ಳೆಯದು.
ಬರೀ ನೀರಿನಲ್ಲಿ ಹೆನ್ನಾ ಮಿಶ್ರ ಮಾಡಬೇಡಿ ಹೆನ್ನಾವನ್ನು ಬರೀ ನೀರಿನಲ್ಲಿ ಮಿಶ್ರ ಮಾಡಬೇಡಿ, ಬದಲಿಗೆ ನೀರಿಗೆ ಕಾಫಿ ಪುಡಿ ಹಾಕಿ ಕುದಿಸಿ ಆ ನೀರು ತಣ್ಣಗಾದ ಮೇಲೆ ಅದರಲ್ಲಿ ಮಿಕ್ಸ್ ಮಾಡಿ ಇಡಿ. ಮಿಕ್ಸ್‌ ಮಾಡಿ 10 ಗಂಟೆ ಆದ ಮೇಲೆ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗಿ ಕಾಣುವುದು.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries