ಕುಂಬಳೆ: ಬೆಳೆದು ನಿಂತಿರುವ ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಾಗ ನಿರೀಕ್ಷಿತ ಯಶಸ್ಸು, ಸುಲಭ ಹಾದಿಯ ಸಂವಹನ ಸಾಧ್ಯವಾಗುತ್ತದೆ ಎಂದು ಕುಂಬಳೆ ಠಾಣಾಧಿಕಾರಿ ಪ್ರಮೋದ್ ಎ. ತಿಳಿಸಿದರು.
ಐತಿಹಾಸಿಕ ಸರೋವರ ಕ್ಷೇತ್ರವಾದ ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರದ ಪರಿಷ್ಕøತ ಜಾಲತಾಣ ಸಹಿತ ವಿವಿಧ ಸೌಲಭ್ಯಗಳನ್ನು ಶನಿವಾರ ಸಂಜೆ ಶ್ರೀಕ್ಷೇತ್ರದ ಅನಂತಶ್ರೀ ಸಭಾ ಭವನದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ದೇವಾಲಯಗಳು ನಮ್ಮ ಸಂಸ್ಕøತಿ, ಜನಜೀವನದ ನಿಕಟ ಸಂವಹನದ ಕೇಂದ್ರವಾಗಿ ಬೆಳೆದುಬಂದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ವಿಶಾಲವಾಗಿ ವಿಸ್ತರಿಸಿರುವ ಭಕ್ತಿ, ಆರಾಧನೆಗಳನ್ನು ಪರಸ್ಪರ ತಿಳಿಸುವ, ವಿಸ್ಕøತವಾಗಿ ಪರಿಚಯಿಸುವ ನಿಟ್ಟಿನಲ್ಲಿ ಜಾಲತಾಣಗಳನ್ನು ಮನೋಜ್ಞವಾಗಿ ಬಳಸಿಕೊಳ್ಳಲು ಇಂತಹ ಚಟುವಟಿಕೆ ಮಾದರಿಯಾದುದು ಎoದವರು ತಿಳಿಸಿದರು.
ಶ್ರೀಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ನ್ಯಾಯವಾದಿ ಉದಯಕುಮಾರ್ ಆರ್.ಗಟ್ಟಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಶ್ರೀಕ್ಷೇತ್ರದ ವಾಟ್ಸ್ ಆಫ್ ತಂಡವನ್ನು ಉದ್ಘಾಟಿಸಿದ ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಅವರು ಮಾತನಾಡಿ, ಪ್ರತಿಯೊಂದು ದೇವಾಲಯಗಳಿಗೂ ಅದರದ್ದೇ ಮಹತ್ವಿಕೆಯಿದ್ದು, ಹೊಸ ತಲೆಮಾರಿಗೆ ಅರಿವು ಮೂಡಿಸುವಲ್ಲಿ ನವ ಮಾಧ್ಯಮಗಳ ಬಳಕೆ ಅತ್ಯಂತ ಸಕಾಲಿಕ ಎಂದು ತಿಳಿಸಿ, ಹರಸಿದರು.
ಶ್ರೀಕ್ಷೇತ್ರದ ದೇವಸ್ವಂ ಬೋರ್ಡ್ ಆಡಳಿತಾಧಿಕಾರಿ ರಾಮನಾಥ ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಭಂಡಾರಿ, ಶ್ರೀದತ್ತ ಸಂಪ್ರದಾಯ ಟ್ರಸ್ಟ್ ನ ಶಂಭುನಾಥ್ ಮಹಾರಾಜ್ ಮುಂಬೈ, ಮಾಧವ ಕಾರಂತ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಜಾಲತಾಣದ ಸಮಗ್ರ ವಿನ್ಯಾಸಕಾರರಾದ ಬೆಂಗಳೂರಿನ ಧ್ಯೇಯ ಮೀಡಿಯಾದ ಹಿರಿಯ ಅಧಿಕಾರಿ ರವಿನಾರಾಯಣ ಗುಣಾಜೆ ಉಪಸ್ಥಿತರಿದ್ದು ಜಾಲತಾಣದ ಮಹತ್ವ, ನಿರ್ವಹಣೆಗಳ ಬಗ್ಗೆ ಮಾಹಿತಿ ನೀಡಿದರು. ರಾಮಚಂದ್ರ ಮಾಸ್ತರ್ ಸ್ವಾಗತಿಸಿ ವಂದಿಸಿದರು.