ನವದೆಹಲಿ: ತೆರಿಗೆ ವಂಚನೆ ತನಿಖೆ ಹಿನ್ನೆಲೆ ಆದಾಯ ತೆರಿಗೆ ಇಲಾಖೆಯು ಮಂಗಳವಾರದಿಂದ ಚೀನಾದ ಟೆಲಿಕಾಂ ಕಂಪನಿ ಹುವಾಯ್ ಕಚೇರಿಗಳಲ್ಲಿ ಶೋಧ ನಡೆಸುತ್ತಿದೆ.
ಮಂಗಳವಾರದಿಂದ ದೆಹಲಿ, ಹರಿಯಾಣದ ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿ ಕಂಪನಿಗಳಲ್ಲಿ ದಾಳಿ ನಡೆಯುತ್ತಿದೆ. ಮೂಲಗಳ ಪ್ರಕಾರ, ಆದಾಯ ತೆರಿಗೆ ಅಧಿಕಾರಿಗಳು ಕಂಪನಿ, ಅದರ ಭಾರತೀಯ ವ್ಯವಹಾರಗಳು ಮತ್ತು ಸಾಗರೋತ್ತರ ವಹಿವಾಟುಗಳ ವಿರುದ್ಧ ತೆರಿಗೆ ವಂಚನೆ ಹಿನ್ನೆಲೆ ಹಣಕಾಸು ದಾಖಲೆಗಳು, ಖಾತೆ ಪುಸ್ತಕಗಳು ಮತ್ತು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದರು. ಕೆಲವು ಕಾಗದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ವರ್ಷ, ಆದಾಯ ತೆರಿಗೆ ಇಲಾಖೆಯು ಚೀನಾದ Xiaomi ಮತ್ತು Oppo ನಂತಹ ಸಂಸ್ಥೆಗಳ ವಿರುದ್ಧ ಹುಡುಕಾಟ ನಡೆಸಿತ್ತು ಮತ್ತು ತೆರಿಗೆ ಕಾನೂನುಗಳು ಮತ್ತು ನಿಯಮಗಳ ಉಲ್ಲಂಘನೆಯ ಮೂಲಕ 6,500 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಲೆಕ್ಕವಿಲ್ಲದ ಆದಾಯವನ್ನು ಪತ್ತೆಹಚ್ಚಿದೆ ಎಂದು ಹೇಳಿಕೊಂಡಿದೆ.