ತಿರುವನಂತಪುರ: ಕೇರಳದ ಒಂದೇ ಒಂದು ಮೂಲೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಕಲ್ಪನೆ ಅತ್ಯಂತ ಅಪಾಯಕಾರಿ ಎಂಬ ಪ್ರಧಾನಿ ಮಾತುಗಳ ನೈಜತೆಯನ್ನು ಅರಿತುಕೊಳ್ಳಲು ಬಿಜೆಪಿ ಕೇರಳ ಘಟಕ ಬಯಸಿದೆ.
ಇಂದು ಕಾಂಗ್ರೆಸ್ ಮತ್ತು ಸಿಪಿಎಂ ದೇಶವಿರೋಧಿ ಚಟುವಟಿಕೆಗಳಿಗೆ ನೇರ ಬೆಂಬಲಿಗರಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಅವರ ಮಾತುಗಳು ಬಹಳ ಮಹತ್ವದ್ದಾಗಿದೆ ಎಂದು ಬಿಜೆಪಿ ಕೇರಳ ಘಟಕ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದೆ. .
ಮೊನ್ನೆ ಸುದ್ದಿ ಸಂಸ್ಥೆ ಎಎನ್‍ಐಗೆ ನೀಡಿದ ಸಂದರ್ಶನದಲ್ಲಿ ನರೇಂದ್ರ ಮೋದಿ ಅವರು ರಾಜಕೀಯ ಪಕ್ಷಗಳ ಅಪಾಯಕಾರಿ ಕಲ್ಪನೆಯ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತದ ವಿಷಯಕ್ಕೆ ಬಂದರೆ, ಸಮಸ್ಯೆ ಅವರ ಸಂಖ್ಯೆಗಳಲ್ಲ, ಆದರೆ ಅವರ ಅಪಾಯಕಾರಿ ಸಿದ್ಧಾಂತ ಎಂದು ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ಅದೇ ರೀತಿ ಕಮ್ಯುನಿಸ್ಟ್ ಪಕ್ಷವೂ ದೇಶದ ಹಲವೆಡೆ ಕಣ್ಮರೆಯಾಗಿ ಕೇರಳದ ಒಂದು ಮೂಲೆಗೆ ಸೀಮಿತವಾಗಿದ್ದರೂ ಅವರ ಕಲ್ಪನೆ ತುಂಬಾ ಅಪಾಯಕಾರಿ ಎಂದಿದ್ದರು.
ಈ ಹಿಂದೆ ನರೇಂದ್ರ ಮೋದಿ ಕೇರಳಕ್ಕೆ ಬಂದಾಗ ಕೇರಳ ಭಯೋತ್ಪಾದನೆಯ ನರ್ಸರಿಯಾಗಿದೆ ಎಂದು ಎಚ್ಚರಿಕೆ ನೀಡಿದ್ದರು. ಅಂದು ಈ ಹೇಳಿಕೆ ಬಗ್ಗೆ ದೊಡ್ಡ ಗುಲ್ಲು ನಡೆದಿತ್ತು. ಆದರೆ ಇಂದು ಅದರ ವಾಸ್ತವತೆಯ ಅರಿವಾಗಿದೆ. ಕೇರಳದ ಭಯೋತ್ಪಾದಕ ಶಕ್ತಿಗಳ ಬಗ್ಗೆ ಯಾರಾದರೂ ಮಾತನಾಡಿದರೆ ನಮಗೆ ಆಘಾತವಾಗುವುದಿಲ್ಲ ಏಕೆಂದರೆ ಇತ್ತೀಚಿನ ಬೆಳವಣಿಗೆಗಳು ಕೇರಳವನ್ನು ಕಮ್ಯುನಿಸ್ಟ್ ಸರ್ಕಾರವು ಆ ಮಟ್ಟಕ್ಕೆ ತಂದಿದೆ ಎಂದು ತೋರಿಸುತ್ತದೆ ಎಂದು ಬಿಜೆಪಿ ಘಟಕ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆಯಲಾಗಿದೆ .
ನರೇಂದ್ರ ಮೋದಿಯವರ ಮಾತುಗಳನ್ನು ಕೇರಳದ ಜನತೆ ಎಚ್ಚರಿಕೆಯಿಂದ ಆಲಿಸುವುದು ಕಾಲದ ಅನಿವಾರ್ಯತೆ ಎಂಬುದನ್ನು ಕೇರಳದ ಜನತೆ ಅರಿತುಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಘಟಕ ಬೊಟ್ಟುಮಾಡಿದೆ. ಭವಿಷ್ಯದ ಪೀಳಿಗೆಯ ಸುರಕ್ಷತೆ ಮತ್ತು ನಮ್ಮ ಶಾಂತಿಯುತ ಜೀವನಕ್ಕಾಗಿ ಅಪಾಯಕಾರಿ ದೇಶವಿರೋಧಿ ಸಿದ್ಧಾಂತಗಳ ವಿರುದ್ಧ ನಾವು ಒಂದಾಗಬೇಕಾಗಿದೆ. ಬಿಜೆಪಿ ಪ್ರತಿಪಾದಿಸುವ ರಾಷ್ಟ್ರೀಯತೆಯ ಜೊತೆಗೆ ಇತರ ರಾಜ್ಯಗಳಂತೆ ಕೇರಳವೂ ಮುಂದೆ ಬರಬೇಕಾದ ಅಗತ್ಯವಿದೆ ಎಂದು ಬಿಜೆಪಿ ಘಟಕ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದೆ.