ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣದ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಪರೂಪದ ವಿಶೇಷ ತುರ್ತು ಅಧಿವೇಶನ ಕರೆಯಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಮತದಾನದಿಂದ ಭಾರತ ದೂರ ಉಳಿದಿದ್ದಕ್ಕೆ ಕೇಂದ್ರ ಸರ್ಕಾರವನ್ನು ಕೆಲ ರಾಜಕೀಯ ಮುಖಂಡರು ಸೋಮವಾರ ಟೀಕಿಸಿದ್ದಾರೆ.
ಆದಾಗ್ಯೂ, ಈ ವಿಚಾರದ ಬಗ್ಗೆ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಉಕ್ರೇನ್ ವಿರುದ್ಧದ ರಷ್ಯಾದ ಅಕ್ರಮಣವನ್ನು ತಡೆಯಲು ನಿರಾಕರಿಸಿದ್ದಕ್ಕಾಗಿ ಭಾರತದ ವಿರುದ್ಧ ಟಿಎಂಸಿ ಮತ್ತು ಶಿವಸೇನಾ ಮುಖಂಡರು ವಾಕ್ ಪ್ರಹಾರ ನಡೆಸಿದ್ದಾರೆ.
ಈಗ ಪರಮಾಣು ಬೆದರಿಕೆ ಹಾಕಲಾಗುತ್ತಿದೆ. ಶಾಂತವಾಗಿರಿ, ತಟಸ್ಥರಾಗಿರಿ, ಇಲ್ಲ?ಎಂದು ಶಿವಸೇನಾ ಮುಖಂಡರಾದ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ. ಯುದ್ಧ ರದ್ದತಿಗೆ ಭಾರತ ನಿರಾಕರಿಸುತ್ತದೆ. ಯುದ್ಧ ನಮ್ಮ ಜೀವನದಲ್ಲಿ ದುಬಾರಿ ಎಂಬುದನ್ನು ತೋರಿಸುತ್ತದೆ. ಅಧಿಕಾರಕ್ಕಾಗಿ ಹಸಿದ ಸರ್ವಾಧಿಕಾರಿಗಳು ಎಂದಿಗೂ ಸಹಾಯ ಮಾಡುವುದಿಲ್ಲ ಎಂದು ಟಿಎಂಸಿ ಮುಖಂಡರಾದ ಮಹುವಾ ಮೊಯಿತ್ರಾ ಹೇಳಿದ್ದಾರೆ.
ಉಕ್ರೇನ್ ವಿರುದ್ಧದ ರಷ್ಯಾ ಆಕ್ರಮಣ ಕುರಿತು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ವಿಶೇಷ ಅಧಿವೇಶನ ಕರೆಯಲು ಭದ್ರತಾ ಮಂಡಳಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಿಂದ ಭಾರತ ದೂರ ಉಳಿದರೂ ಬೆಲರೂಸ್ ಗಡಿಯಲ್ಲಿ ರಷ್ಯಾ- ಉಕ್ರೇನ್ ಮಾತುಕತೆ ನಿರ್ಧಾರವನ್ನು ಭಾರತ ಸ್ವಾಗತಿಸಿದೆ.