ನವದೆಹಲಿ: ಭಾರತದಲ್ಲಿರುವ ಲಂಕಾ ಹೈಕಮಿಷನರ್ ಮಿಲಿಂದಾ ಮೊರಾಗೋಡಾ ಫೆ.24 ರಂದು ನಾಗ್ಪುರದಲ್ಲಿರುವ ಆರ್ ಎಸ್ ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು.
ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು ಲಂಕಾ ಹೈಕಮಿಷನರ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ರೇಷಿಮ್ ಬಾಘ್ ನಲ್ಲಿರುವ ಸ್ಮೃತಿ ಮಂದಿರಕ್ಕೂ ಲಂಕಾ ಹೈಕಮಿಷನರ್ ಭೇಟಿ ನೀಡಿದ್ದಾರೆ. ಸ್ಮೃತಿ ಮಂದಿರದಲ್ಲಿ ಆರ್ ಎಸ್ ಎಸ್ ಸ್ಥಾಪಕ ಡಾ. ಕೇಶವ ಬಲಿರಾಮ್ ಹೆಗ್ಡೆವಾರ್ ಅವರ ಸ್ಮಾರಕವಿದೆ.
ತನ್ನ ದೇಶದಿಂದ ಹೊರಡುವ ಶಿಪ್ಗಳಿಗೆ ತೈಲ ತುಂಬಿಸಲು ಕೂಡ ಹಣವಿಲ್ಲದ ಸ್ಥಿತಿ ಎದುರಿಸುತ್ತಿರುವ ಲಂಕಾಗೆ ಭಾರತ ನೆರವು ನೀಡುವ ನಿಟ್ಟಿನಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿತ್ತು.