ಮಂಜೇಶ್ವರ: ಹುಟ್ಟು ಹಬ್ಬದ ಆಚರಣೆಗೆ ಸಾಮಾಗ್ರಿ ತರಲೆಂದು ತಂದೆಯೊಂದಿಗೆ ತೆರಳುತಿದ್ದ ಸ್ಕೂಟರಿಗೆ ರಿಕ್ಷಾ ಡಿಕ್ಕಿ ಹೊಡೆದು ಗಂಭೀರ ಗಾಯಗಳೊಂದಿಗೆ ಆಸ್ಪತೈಗೆ ದಾಖಲಾದ ಬಾಲಕಿ ಚಿಕಿತ್ಸೆಗೆ ಸ್ಪಂಧಿಸದೆ ಸಾವನ್ನಪ್ಪಿದ್ದಾಳೆ.
ಮಂಜೇಶ್ವರ ಕಟ್ಟೆ ಬಜಾರ್ ನಿವಾಸಿ ರವಿಚಂದ್ರ ಎಂಬವರ ಪುತ್ರಿ ದೀಪಿಕಾ (11) ಸಾವನ್ನಪ್ಪಿದ ದುರ್ದೈವಿ. ಬಾಲಕಿಯ ತಂದೆ ರವಿಚಂದ್ರನ್ ಕೂಡಾ ಗಂಭೀರ ಗಾಯಗೊಂಡಿದ್ದು ಇವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಗೋವಿಂದ ಪೈ ಗಿಳಿವಿಂಡು ನಿವಾಸದ ಪರಿಸರದಲ್ಲಿ ಬುಧವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ದೀಪಿಕಾ ಮಂಜೇಶ್ವರದ ಸರ್ಕಾರಿ ಶಾಲೆಯೊಂದರ ಆರನೇ ತರಗತಿ ವಿದ್ಯಾರ್ಧಿನಿಯಾಗಿದ್ದಾಳೆ. ಮಂಜೇಶ್ವರ ಪೋಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿದ್ದಾರೆ.