ಕಾಸರಗೋಡು: ಅತಿ ಪುರಾತನ ಶಕ್ತಿ ಕೇಂದ್ರಗಳಲ್ಲಿ ಒಂದಾದ ಅಣಂಗೂರು ನಡುವಳಪ್ಪು ಶ್ರೀ ರಕ್ತೇಶ್ವರೀ ಅಮ್ಮ ಕ್ಷೇತ್ರದಲ್ಲಿ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ. 4ರಿಂದ 8ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರಗಲಿದೆ.
ಫೆ. 4ರಂದು ಬ್ರಹ್ಮಕಲಶೋತ್ಸವ ನಡೆಯುವುದು. 6ರಂದು ಶ್ರೀ ನಾಗಪ್ರತಿಷ್ಠೆ ನಡೆಯುವುದು. 7ರಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅನುಗ್ರಹ ಭಾಷಣ ಮಾಡುವರು. ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಶಶಿಕಲಾ ಟೀಚರ್ ಪಟ್ಟಾಂಬಿ ಧಾರ್ಮಿಕ ಭಾಷಣ ಮಾಡುವರು.