ಬೆಂಗಳೂರು : ಪಂಚರಾಜ್ಯಗಳ ವಿಧಾನಸಭೆ ಚುನಾವಣೆ (Assembly Elections) ಹಿನ್ನೆಲೆ ಕಳೆದ 2 ತಿಂಗಳಿಂದ ಪಂಜಾಬ್ , ಗೋವಾ ಸೇರಿದಂತೆ ಹಲವಡೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ (Arvind Kejriwal) ಭರ್ಜರಿ ಪ್ರಚಾರ ನಡೆಸಿದ್ರು. ವಿಶ್ರಮಿಸದೇ ಪ್ರಚಾರದಲ್ಲಿ ನಿರತರಾಗಿದ್ದ ಅರವಿಂದ ಕೇಜ್ರಿವಾಲ್ ಅವರು ಇದೀಗ ಅನಾರೋಗ್ಯಕ್ಕೀಡಾಗಿದ್ದಾರೆ.
ಚುನಾವಣೆ (Election) ಪ್ರಚಾರಕ್ಕೆ ತೆರಳಿದ ಪರಿಣಾಮ ಅವರ ಆಹಾರದಲ್ಲಿ ವ್ಯತ್ಯಯವಾಗಿದ್ದು, ಚಿಕಿತ್ಸೆ ಪಡೆಯಲು ಬೆಂಗಳೂರಿನ ಜಿಂದಾಲ್ಗೆ (Jindal Naturecure) ಆಗಮಿಸಿದ್ದಾರೆ. ಬೆಂಗಳೂರು ಉತ್ತರದ ಮಾದವಾರದ ಬಳಿ ಇರೋ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಅರವಿಂದ್ ಕೇಜ್ರಿವಾಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟದ ತೊಂದರೆ, ಕೆಮ್ಮು, ಸಕ್ಕರೆ ಕಾಯಿಲೆಯಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಬಳಲುತ್ತಿದ್ದಾರೆ.
ಹಲವು ಬಾರಿ ಬೆಂಗಳೂರಿನ ಪ್ರಕೃತಿ ಕೇಂದ್ರ ಜಿಂದಾಲ್ನಲ್ಲಿ ಚಿಕಿತ್ಸೆ ಪಡೆಯಲು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಗಮಿಸಿದ್ದಾರೆ ಆದ್ರೆ ಈ ಬಾರಿ ಅವರು ತಮ್ಮ ಕುಟುಂಬ ಸಮೇತರಾಗಿ ಬಂದು ಜಿಂದಾಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದಲ್ಲಿ ಏರುಪೇರು ಉಂಟಾಗಿರೋ ಹಿನ್ನೆಲೆ ಅವರು ಜಿಂದಾಲ್ನಲ್ಲಿ ಚಿಕಿತ್ಸೆ ಪಡೆಯಲು ಆಗಮಿಸಿದ್ದಾರೆ.
ಮಾರ್ಚ್ 7ರ ವರೆಗೆ ಜಿಂದಾಲ್ನಲ್ಲೇ ಚಿಕಿತ್ಸೆ
ಇವತ್ತು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿರೋ ಅರವಿಂದ ಕೇಜ್ರಿವಾಲ್ ಇನ್ನು ಒಂದು ವಾರಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಉಸಿರಾಟದ ತೊಂದರೆ, ಕೆಮ್ಮು, ಸಕ್ಕರೆ ಕಾಯಿಲೆಯಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಬಳಲುತ್ತಿದ್ದಾರೆ. ಆರೋಗ್ಯ ಹದಗೆಟ್ಟಾಗ ಹಲವು ಬಾರಿ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದಿದ್ದಾರೆ. ಈ ಬಾರಿ ಅವ್ರು ಮಾರ್ಚ್ 7ರ ವರೆಗೆ ಚಿಕಿತ್ಸೆ ಪಡೆದು ವಾಪಸ್ ಆಗಲಿದ್ದಾರೆ.
ಪಂಚರಾಜ್ಯ ಚುನಾವಣೆ ಹಿನ್ನೆಲೆ ಎಎಪಿ ಅಭ್ಯರ್ಥಿಗಳ ಪರ ದೆಹಲಿ ಸಿಎಂ ಭರ್ಜರಿ ಪ್ರಚಾರ ನಡೆಸಿದ್ರು. ಎಎಪಿಗೆ ಪ್ರತಿಷ್ಠೆಯ ಕಣವಾಗಿರೋ ಪಂಜಾಬ್ ನಲ್ಲಿ ಗೆಲುವಿ ಸಾಧಿಸಲೇಬೇಕೆಂದು ಕೇಜ್ರಿವಾಲ್ ಹಗಲು, ರಾತ್ರಿ ಎನ್ನದೆ ಪ್ರಚಾರ, ಸಭೆ, ಸಮಾರಂಭಗಳಲ್ಲಿ ಬ್ಯುಸಿಯಾಗಿದ್ರು, ಮೊದಲೇ ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ಪ್ರಚಾರದ ವೇಳೆ ಧೂಳು, ಆಯಾಸದ ಓಡಾಟ ಅವರನ್ನು ಮತ್ತೆ ಆಸ್ಪತ್ರೆ ಸೇರುವಂತೆ ಮಾಡಿದೆ. ಈ ಹಿಂದೆ ಕೂಡ ಜಿಂದಾಲ್ಗೆ ಬಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಚಿಕಿತ್ಸೆ ಪಡೆದಿದ್ರು.
ಈ ಹಿಂದೆ ಜಿಂದಾಲ್ನಲ್ಲಿ ಚಿಕಿತ್ಸೆ ಪಡೆದಿದ್ದ ಕೇಜ್ರಿವಾಲ್
2018ರಲ್ಲಿಯೂ ಸಹ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿತ್ತು. ರಕ್ತದಲ್ಲಿನ ಸಕ್ಕರೆ ಪ್ರಮಾಣ ಏಕಾಏಕಿ ಏರಿಕೆಯಾಗಿತ್ತು. ಹೀಗಾಗಿ ಅವರಿಗೆ ದಿನಕ್ಕೆ ಮೂರು ಬಾರಿ ಇನ್ಸುಲಿನ್ ತೆಗೆದುಕೊಳ್ಳಬೇಕಾದ ಸ್ಥಿತಿ ಎದುರಾಗಿತ್ತು. ಸುಮಾರು 10-12 ದಿನಗಳ ಕಾಲ ಬೆಂಗಳೂರಿನಲ್ಲಿ ಪ್ರಕೃತಿ ಚಿಕಿತ್ಸೆಗೆ (ನ್ಯಾಚುರೋಪತಿ) ಅವರು ಒಳಗಾಗಲಿದ್ರು ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.
ಕೇಜ್ರಿವಾಲ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಭೇಟಿ ನೀಡುತ್ತಿರುವುದು ಇದು 5ನೇ ಬಾರಿ. ಈ ಹಿಂದೆ 2015ರ ಮಾ.5ರಂದು ಜಿಂದಾಲ್ ನ್ಯಾಚುರೋಪತಿ ಇನ್ಸಿ$್ಟಟ್ಯೂಟ್‌ಗೆ ದಾಖಲಾಗಿ ಕೆಮ್ಮಿಗೆ ಚಿಕಿತ್ಸೆ ಪಡೆದಿದ್ದರು. ಬಳಿಕ 2016ರ ಜ.30ರಂದು ಕೆಮ್ಮು ಮತ್ತು ಸಕ್ಕರೆ ಕಾಯಿಲೆಯ ಚಿಕಿತ್ಸೆಗಾಗಿ ಜಿಂದಾಲ್ ನ್ಯಾಚುರೋಪತಿ ಇನ್ಸ್ಟಿಟ್ಯೂಟ್‌ಗೆ ಮತ್ತೊಮ್ಮೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. 2016ರ ಸೆ.15ರಂದು ಬೆಂಗಳೂರಿನ ಮಜುಂದಾರ್ ಶಾ ಕ್ಯಾನ್ಸರ್ ಸೆಂಟರ್‌ನಲ್ಲಿ ಕೆಮ್ಮಿಗೆ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಕಿರುನಾಲಿಗೆ ಚಿಕಿತ್ಸೆ ನೆರವೇರಿಸಲಾಗಿತ್ತು. ಇದೀಗ ಕುಟುಂಬ ಸಮೇತರಾಗಿ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಒಂದು ವಾರಗಳ ಇಲ್ಲೇ ಇದ್ದು ಗುಣಮುಖರಾದ ಬಳಿಕ ವಾಪಸ್ ಆಗಲಿದ್ದಾರೆ.