ಮಾನಂದವಾಡಿ: ಮಾನಂತವಾಡಿ ಲಿಟ್ಲ್ ಫ್ಲವರ್ ಯು.ಪಿ.ಶಾಲೆಯ ಆಡಳಿತ ಮಂಡಳಿಯು ಸಮವಸ್ತ್ರ ಹೊರತಾದ ವಸ್ತ್ರಗಳ ನಿಷೇಧವನ್ನು ಮುಂದುವರಿಸುವುದಾಗಿ ತಿಳಿಸಿದೆ. ಸಬ್ ಕಲೆಕ್ಟರ್ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಶಾಲಾ ಅಧಿಕಾರಿಗಳು ತಮ್ಮ ನಿಲುವನ್ನು ಪ್ರಕಟಿಸಿದರು. ವಿದ್ಯಾರ್ಥಿಗಳಿಗೆ ಸಮವಸ್ತ್ರ ಧರಿಸಿ ಶಾಲೆಗೆ ತೆರಳುವ ಸ್ವಾತಂತ್ರ್ಯವಿದೆ. ಸಮವಸ್ತ್ರದ ಹೊರತಾಗಿ ಇತರ ಬಟ್ಟೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಶಾಲೆಯ ಪರಿಸರದಲ್ಲಿ ಪೋಲೀಸ್ ಕಾವಲು ಏರ್ಪಡಿಸಲಾಗಿದೆ. ಉದ್ವಿಗ್ನ ವಾತಾವರಣ ಉಂಟಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಶಾಲೆಯಲ್ಲಿ ಮಕ್ಕಳು ಸಮವಸ್ತ್ರದ ನಿಯಮವನ್ನು ಪಾಲಿಸಬೇಕು ಮತ್ತು ಹಿಜಾಬ್ ಧರಿಸಿ ತರಗತಿಗೆ ಬರಬಾರದು ಎಂದು ಮುಖ್ಯೋಪಾಧ್ಯಾಯಿನಿ ಹೇಳಿರುವ ವಿಡಿಯೋ ಬಿಡುಗಡೆಯಾಗಿದೆ. ನಂತರ ಕೇರಳದಲ್ಲೂ ಹಿಜಾಬ್ ವಿಚಾರ ಚರ್ಚೆಗೆ ಗ್ರಾಸವಾಗಿತ್ತು.
ಮದರಸಾ ಶಿಕ್ಷಕರಾಗಿರುವ ಪೋಷಕರು ಶಿಕ್ಷಕರ ಮಾತನ್ನು ಮೊಬೈಲ್ ನಲ್ಲಿ ನಕಲು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ನಂತರ ಇಸ್ಲಾಮಿಸ್ಟ್‍ಗಳು ಶಾಲೆಯ ಫೇಸ್‍ಬುಕ್ ಪುಟದ ಮೇಲೆ ಸೈಬರ್ ದಾಳಿ ನಡೆಸಿದರು. ಶಿಕ್ಷಕರ ಮೇಲೆ ಇಸ್ಲಾಮಿಸ್ಟ್ ಸೈಬರ್ ದಾಳಿ ನಡೆಸಿ ಬೆದರಿಕೆಯೂ ಹಾಕಲಾಗಿತ್ತು.