HEALTH TIPS

ಮೂರು ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ಆರ್‌ಬಿಐ

         ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ ಮೂರು ಸಹಕಾರಿ ಬ್ಯಾಂಕ್‌ಗಳಿಗೆ ದಂಡ ವಿಧಿಸಿದೆ, ತಮಿಳುನಾಡಿನ ಎರಡು ಮತ್ತು ಜಮ್ಮು ಮತ್ತು ಕಾಶ್ಮೀರದ ಒಂದು ಬ್ಯಾಂಕ್‌ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ದಂಡವನ್ನು ವಿಧಿಸಿದೆ.

           ದಿ ಬಿಗ್ ಕಾಂಚೀಪುರಂ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್-ಕಾಂಚಿಪುರಂ, ಚೆನ್ನೈ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮತ್ತು ದಿ ಬಾರಾಮುಲ್ಲಾ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಬ್ಯಾಂಕುಗಳಿಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ದಂಡವನ್ನು ವಿಧಿಸಿದೆ.

             ಬ್ಯಾಂಕ್ ನಿಯಂತ್ರಕರು ಚೆನ್ನೈ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್‌ಗೆ 1 ಲಕ್ಷ ರೂಪಾಯಿ ದಂಡ ಹಾಗೂ ಉಳಿದ ಎರಡು ಬ್ಯಾಂಕ್‌ಗಳಿಗೆ 2 ಲಕ್ಷ ರೂಪಾಯಿ ದಂಡವನ್ನು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ವಿಧಿಸಿದೆ. ಈ ಹಿಂದೆ ಪ್ರಮುಖ ಬ್ಯಾಂಕ್‌ಗಳಿಗೂ ಆರ್‌ಬಿಐ ದಂಡವನ್ನು ವಿಧಿಸಿದೆ.
               ಈ ಮೂರು ಬ್ಯಾಂಕ್‌ಗಳಿಗೆ ಆರ್‌ಬಿಐ ದಂಡವೇಕೆ ವಿಧಿಸಿದ್ದು?
           ಬಾರಾಮುಲ್ಲಾ ಕೋ-ಆಪರೇಟಿವ್ ಬ್ಯಾಂಕ್‌ನ ಪ್ರಕರಣದಲ್ಲಿ, ನಬಾರ್ಡ್ ನಡೆಸಿದ ಶಾಸನಬದ್ಧ ತಪಾಸಣೆಯು ಕೆಲವು ಸೆಕ್ಷನ್‌ಗಳ ಉಲ್ಲಂಘನೆಯನ್ನು ಬಹಿರಂಗಪಡಿಸಿದೆ ಎಂದು ಆರ್‌ಬಿಐ ಹೇಳಿದೆ. ಬ್ಯಾಂಕ್ ಬಾಡಿಗೆಗೆ ತನ್ನ ಆವರಣವನ್ನು ಬಿಟ್ಟುಕೊಟ್ಟಿದೆ. ತನ್ನ ಸ್ವಂತ ಬಳಕೆಗೆ ಅಗತ್ಯವಿಲ್ಲದ ಸ್ಥಿರ ಆಸ್ತಿಗಳನ್ನು ಹೊಂದಿದೆ," ಎಂದು ದಂಡವನ್ನು ವಿಧಿಸಲಾಗಿದೆ. ನಿರ್ದಿಷ್ಟ ಆರ್‌ಬಿಐ ನಿರ್ದೇಶನಗಳನ್ನು ಉಲ್ಲಂಘಿಸಿ ಬ್ಯಾಂಕ್ ಹೊಸ ಠೇವಣಿಗಳನ್ನು ಸ್ವೀಕರಿಸಿದೆ. ಅದನ್ನೇ ಆಧರಿಸಿ, ದಂಡವನ್ನು ಏಕೆ ವಿಧಿಸಬಾರದು ಎಂಬುದಕ್ಕೆ ಕಾರಣ ತೋರಿಸಲು ಸೂಚಿಸಿ ಬ್ಯಾಂಕ್‌ಗೆ ನೋಟಿಸ್ ನೀಡಲಾಗಿದೆ. ಬ್ಯಾಂಕಿನ ಉತ್ತರವನ್ನು ಪರಿಗಣಿಸಿದ ನಂತರ, ಆರೋಪಗಳು ರುಜುವಾತಾಗಿದೆ ಮತ್ತು ವಿತ್ತೀಯ ದಂಡವನ್ನು ವಿಧಿಸಲು ಆಧಾರಗಳಿವೆ ಎಂದು ಆರ್‌ಬಿಐ ಅಂತಿಮವಾಗಿ ತೀರ್ಮಾನ ಕೈಗೊಂಡಿದೆ. ಎರಡನೇ ಪ್ರಕರಣದಲ್ಲಿ, ಮಾರ್ಚ್ 31, 2020 ರಂತೆ ದಿ ಬಿಗ್ ಕಾಂಚೀಪುರಂ ಕೋ-ಆಪರೇಟಿವ್ ಬ್ಯಾಂಕ್‌ನ ಆರ್ಥಿಕ ಸ್ಥಿತಿಯನ್ನು ಆಧರಿಸಿದ ತಪಾಸಣೆ ವರದಿಯು ಉಲ್ಲಂಘನೆ ಬಹಿರಂಗವಾಗಿದೆ ಎಂದು ಆರ್‌ಬಿಐ ಹೇಳಿದೆ. ಅದನ್ನೇ ಆಧರಿಸಿ ಬ್ಯಾಂಕ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ.
            ಸೆಂಟ್ರಲ್ ಬ್ಯಾಂಕ್ ನೀಡಿದ ಕೆಲವು ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐದು ಬ್ಯಾಂಕ್‌ಗಳ ವಿರುದ್ಧ ಒಟ್ಟು 6.35 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವಾರ ಪ್ರಕಟಿಸಿದೆ. ಹೈದರಾಬಾದ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್; ಜಿಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ ಮರ್ಯಾಡಿಟ್, ಗ್ವಾಲಿಯರ್; ವ್ಯವಸಾಯಿಕ್ ಸಹಕಾರಿ ಬ್ಯಾಂಕ್ ಲಿಮಿಟೆಡ್, ರಾಯಪುರ; ಮುಲಾ ಸಹಕಾರಿ ಬ್ಯಾಂಕ್ ಲಿಮಿಟೆಡ್, ಸೋನೈ, ಅಹ್ಮದ್‌ನಗರ ಮತ್ತು ಜಿಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ ಮರ್ಯಾದಿತ್, ಶಿವಪುರಿ ಬ್ಯಾಂಕ್‌ಗಳಿಗೆ ದಂಡವನ್ನು ವಿಧಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಆರ್‌ಬಿಐ ನಿಯಮವನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 1.8 ಕೋಟಿ ರೂಪಾಯಿ ಹಾಗೂ ಐಸಿಐಸಿಐ ಬ್ಯಾಂಕ್‌ಗೆ 30 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಯ ಮೇಲ್ವಿಚಾರಣಾ ಮೌಲ್ಯಮಾಪನಕ್ಕಾಗಿ (ISE) ಶಾಸನಬದ್ಧ ತಪಾಸಣೆಯನ್ನು ಮಾರ್ಚ್ 31, 2019 ರಂತೆ ಅದರ ಹಣಕಾಸಿನ ಸ್ಥಿತಿಯನ್ನು ಉಲ್ಲೇಖಿಸಿ ನಡೆಸಲಾಗಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಹಾಗೆಯೇ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ (ಎಸ್‌ಬಿಐ) ಸೋಮವಾರದಂದು ಒಂದು ಕೋಟಿ ರೂಪಾಯಿ ದಂಡವನ್ನು ವಿಧಿಸಿದ್ದ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಇಂದು ಪೇಟಿಯಂಗೆ ಭಾರಿ ದಂಡ ವಿಧಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries