ಮಧೂರು: ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮೇ ತಿಂಗಳ 25ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಜರುಗಲಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಬಹುತೇಕ ಪರಿಹಾರಗಳನ್ನೂ ನಡೆಸಲಾಗಿದ್ದು, ಈ ಎಲ್ಲಾ ವಿಷಯಗಳ ಬಗ್ಗೆ ಚಿಂತಿಸಿ ಮುಂದಿನ ಕೆಲಸಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಸಮಾಲೋಚನಾ ಸಭೆ ಫೆ. 20ರಂದು ಸಂಜೆ 4ಕ್ಕೆ ದೇವಸ್ಥಾನ ವಠಾರದಲ್ಲಿ ಜರುಗಲಿರುವುದಾಗಿ ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಅಶೋಕ ರೈ ಮತ್ತು ಸುಕುಮಾರ ಕುದ್ರಪ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.