ಉಸ್ಮಾನಾಬಾದ್ : ಇವರ ಮೊದಲ ಮಗ ಪ್ರೆಸಿಡೆಂಟ್, ಎರಡನೆಯ ಮಗ ಪ್ರಧಾನಮಂತ್ರಿ! ಅಣ್ಣತಮ್ಮಂದಿರಿಗೆ ಹುಟ್ಟುತ್ತಲೇ ಪ್ರತಿಷ್ಠಿತ ಪದವಿ!
ಇದೇನು ವಿಚಿತ್ರ ಎನ್ನುವಿರಾ? ಇಂಥದ್ದೊಂದು ವಿಚಿತ್ರ ಇರುವುದು ಮಹಾರಾಷ್ಟ್ರದ ಉಸ್ಮಾನಾಬಾದ್ ಮನೆಯಲ್ಲಿ.
ಇವರು ತಮ್ಮ ಮೊದಲ ಮಗನಿಗೆ ಪ್ರೆಸಿಡೆಂಟ್ ಎಂದು ಹೆಸರಿಟಿದ್ದಾರೆ. ಆದರೆ ಈ ಹೆಸರು ಇಟ್ಟಾಗ ಅವರಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಆದರೆ ಅವರಿಗೆ ಎರಡನೆಯ ಮಗುವಿನ ಹೆಸರಿನಿಂದ ಸಮಸ್ಯೆಯಾಗಿರುವುದು. ಇದಕ್ಕೆ ಕಾರಣ, ಇವರು ಎರಡನೆಯ ಮಗುವಿಗೆ 'ಪ್ರಧಾನ ಮಂತ್ರಿ' ಎಂಬ ಅರ್ಥಬರುವ 'ಪಂತ್ ಪ್ರಧಾನ್' ಎಂದು ಹೆಸರು ಇಟ್ಟಿದ್ದಾರೆ.
ಆದರೆ ಇದು ಇವರಿಗೆ ಸಮಸ್ಯೆ ಆಗಿರಲು ಕಾರಣ, ಈ ದಂಪತಿ ಮಗುವಿನ ಜನನ ಪ್ರಮಾಣ ಪತ್ರ ಪಡೆದುಕೊಳ್ಳಲು ಮೂರು ತಿಂಗಳ ಕಾಲ ಪರದಾಡಬೇಕಾಯಿತು. ಸೊಲ್ಲಾಪುರದ ಬೋರಮಣಿ ಎಂಬಲ್ಲಿ ಸೆಪ್ಟೆಂಬರ್ 10ರಂದು ಈ ಮಗು ಜನಿಸಿದೆ. ಅದಕ್ಕೆ 'ಪಂತ್ ಪ್ರಧಾನ್ʼ ಎಂದು ಹೆಸರಿಟ್ಟಿದ್ದಾರೆ. ಆದರೆ ಪಂತ್ ಪ್ರಧಾನ್ ಎಂಬುದು ಸಂವಿಧಾನಿಕ ಹುದ್ದೆಯೊಂದರ ಹೆಸರು ಎಂದು ಭಾವಿಸಿದ ಅಧಿಕಾರಿಗಳು, ಅದರ ಜನನ ಪ್ರಮಾಣಪತ್ರ ನೀಡಲು ವಿಳಂಬ ಮಾಡಿದ್ದಾರೆ. ಕೊನೆಗೆ ಇದು ಮಗುವಿನ ಹೆಸರು ಎಂದು ತಿಳಿಸಲು ದಂಪತಿ ಮೂರು ತಿಂಗಳು ಎಲ್ಲಾ ಇಲಾಖೆ ಅಲೆದಾಡಿದ ಮೇಲೆ ಜನನ ಪ್ರಮಾಣ ಪತ್ರ ಸಿಕ್ಕಿದೆ.
2020ರ ಜೂನ್ 19ರಂದು ಜನಿಸಿದ ತಮ್ಮ ಮೊದಲ ಮಗುವಿಗೆ ಪ್ರೆಸಿಡೆಂಟ್ ಎಂದು ಹೆಸರು ಇಟ್ಟಿದ್ದೆವು. ಆದರೆ ಜನನ ಪ್ರಮಾಣ ಪತ್ರ ಪಡೆಯಲು ಸಮಸ್ಯೆಯಾಗಲಿಲ್ಲ. ಆದರೆ ಪ್ರಧಾನಮಂತ್ರಿ ಅರ್ಥದ ಹೆಸರು ಇಟ್ಟಾಗ ಕಷ್ಟವಾಯಿತು ಎಂದು ಚೌಧರಿ ದಂಪತಿ ಹೇಳಿದ್ದಾರೆ.