HEALTH TIPS

ಕೇಂದ್ರ ಬಜೆಟ್ ಬೆನ್ನಲ್ಲೇ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ: ಇದು ಉದ್ಯೋಗ, ಮೂಲಸೌಕರ್ಯ, ಅಭಿವೃದ್ಧಿ ಬಜೆಟ್

           ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಇಂದು ಬಜೆಟ್​ ಮಂಡನೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.

           ಈ ಬಜೆಟ್​ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಪೂರಕವಾಗಿದೆ. ಉದ್ಯೋಗ, ಮೂಲ ಸೌಕರ್ಯ ಮತ್ತು ಅಭಿವೃದ್ಧಿಯ ಬಜೆಟ್​ ಇದು.

          ಬಡವರ, ಮಧ್ಯಮ ವರ್ಗದ ಜನರ ಏಳಿಗೆಗಾಗಿ ಸರ್ಕಾರ ಬದ್ಧವಿದೆ. ಪ್ರತಿಯೊಬ್ಬರ ಮನೆಗೂ ಶೌಚಗೃಹ ಸಿಗಬೇಕು. ಬಜೆಟ್​ನಲ್ಲಿ ಎಲ್ಲ ವಲಯಕ್ಕೂ ಆದ್ಯತೆ ನೀಡಲಾಗಿದೆ. ಭಾರದ ಗಡಿಯಲ್ಲಿರುವ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಇದು ಭಾರತದ ಭದ್ರತಾ ದೃಷ್ಟಿಯ ಜತೆಗೆ ಗ್ರಾಮಗಳ ಅಭಿವೃದ್ಧಿ ದೃಷ್ಟಿಯತ್ತ ಪ್ರಮುಖ ಹೆಜ್ಜೆ ಇಡಲಾಗಿದೆ. ಜನಸಾಮಾನ್ಯವರು ಈ ಬಜೆಟ್​ ಅನ್ನು ಮೆಚ್ಚಿದ್ದಾರೆ. ಅತ್ತುತ್ತಮ ಬಜೆಟ್​ ಮಂಡಿಸಿದ ನಿರ್ಮಲಾ ಸೀತಾರಾಮನ್​ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.

             ಈ ಬಜೆಟ್ ಜನರಲ್ಲಿ ಹೊಸ ಭರವಸೆ ಮತ್ತು ಅವಕಾಶ ಸೃಷ್ಟಿಸಿದೆ. ಇದು ಆರ್ಥಿಕತೆಯನ್ನು ಬಲ ಪಡಿಸುವ ಜತೆಗೆ ಮೂಲಸೌಕರ್ಯ, ಹೂಡಿಕೆ, ಬೆಳವಣಿಗೆ ಮತ್ತು ಉದ್ಯೋಗಾವಕಶಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಯುವಜನರ ಉಜ್ವಲ ಭವಿಷ್ಯಕ್ಕೆ ಪೂರಕವಾಗಿದೆ. ದೇಶದಲ್ಲಿ ಮೊದಲ ಬಾರಿಗೆ, 'ಪರ್ವತ್ ಮಾಲಾ' ಯೋಜನೆಯನ್ನು ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು-ಕಾಶ್ಮೀರ, ಈಶಾನ್ಯ ಪ್ರದೇಶಗಳಲ್ಲಿ ಆರಂಭಿಸಲಾಗುತ್ತಿದೆ. ಇದು ಬೆಟ್ಟಗುಡ್ಡ ಪ್ರದೇಶದಲ್ಲೂ ಆಧುನಿಕ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಗಡಿ ಗ್ರಾಮಗಳಿಗೆ ಶಕ್ತಿ ಬರಲಿದೆ ಎಂದು ಪ್ರಧಾನಿ ತಿಳಿಸಿದರು.

           ಮಾ ಗಂಗಾ ಶುದ್ಧೀಕರಣದ ಜತೆಗೆ ರೈತರ ಕಲ್ಯಾಣಕ್ಕಾಗಿ ಮಹತ್ವದ ಹೆಜ್ಜೆ ಇಡಲಾಗಿದೆ. ಉತ್ತರಾಖಂಡ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಗಂಗಾ ನದಿಯ ದಡದಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುವುದು. ಇದು ಗಂಗಾ ನದಿಯನ್ನು ರಾಸಾಯನಿಕ ಮುಕ್ತಗೊಳಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದರು.

ಗಂಗಾ ನದಿ ಶುದ್ಧೀಕರಣದ ಜತೆಗೆ ರೈತರ ಕಲ್ಯಾಣಕ್ಕಾಗಿ ಮಹತ್ವದ ಹೆಜ್ಜೆ ಇಡಲಾಗಿದೆ. ಉತ್ತರಾಖಂಡ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಗಂಗಾ ನದಿಯ ದಡದಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುವುದು. ಇದು ಗಂಗಾ ನದಿಯನ್ನು ರಾಸಾಯನಿಕ ಮುಕ್ತಗೊಳಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದರು.

           2.25 ಲಕ್ಷ ಕೋಟಿಗಿಂತ ಹೆಚ್ಚಿನ MSP ಯ ಘೋಷಣೆಯನ್ನು ನೇರವಾಗಿ (ರೈತರಿಗೆ) ವರ್ಗಾಯಿಸಲಾಗುವುದು. ಈ ಬಜೆಟ್ ರೈತರ ಆದಾಯವನ್ನು ದ್ವಿಗುಣಗೊಳಿಸಲಿದೆ. MSMEಗಳಿಗೆ, ಕ್ರೆಡಿಟ್ ಗ್ಯಾರಂಟಿ ಮತ್ತು ಅನೇಕ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದ ಪ್ರಧಾನಿ, ನಾಳೆ(ಬುಧವಾರ) ಬೆಳಗ್ಗೆ 11 ಗಂಟೆಗೆ ಬಜೆಟ್ ಮತ್ತು ಸ್ವಾವಲಂಬಿ ಭಾರತ ಕುರಿತು ವಿವರವಾಗಿ ಮಾತನಾಡುವೆ ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries