HEALTH TIPS

ಚಿಂತನ ಪ್ರಕಾಶನದವರ ವಿವಿಧ ಸ್ಪರ್ಧಾವೇದಿಕೆಯಲ್ಲಿ ವಿಜೇತರಾದ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಮಕ್ಕಳು

  

              ಕುಂಬಳೆ: ಇತ್ತೀಚೆಗೆ 'ಚಿಂತನ ಪ್ರಕಾಶನ ಚಿತ್ರದುರ್ಗ' ಇವರು  ನಡೆಸಿದ   ಗಣಿತ, ವಿಜ್ಞಾನ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ಮುಜುಂಗಾವು ವಿದ್ಯಾಪೀಠದ ಮಕ್ಕಳು ಭಾಗವಹಿಸಿ ಹಲವು ಬಹುಮಾನಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

          ಈ ಬಹುಮಾನಗಳನ್ನು ಇತ್ತೀಚೆಗೆ ಶಾಲಾ ಆಡಳಿತಸಮಿತಿ ಅಧ್ಯಕ್ಷ ಎಸ್.ಎನ್ .ರಾವ್ ಮುನ್ನಿಪ್ಪಾಡಿಯವರು ವಿಜೇತರಿಗೆ ಹಸ್ತಾಂತರಿಸಿದರು. ವೇದಿಕೆಯಲ್ಲಿ ಶ್ಯಾಮರಾಜ್ ದೊಡ್ಡಮಾಣಿ, ವಿದ್ಯಾಪೀಠದ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ ಪೆರಡಾನ, ಚಿತ್ರಕಲಾ ಅಧ್ಯಾಪಕ ಶಿವಾನಂದ ಆಚಾರ್ಯ, ಅಧ್ಯಾಪಿಕೆ ಪ್ರತೀಕ್ಷಾ ಎನ್. ಮೊದಲಾದವರು ಉಪಸ್ಥಿತರಿದ್ದರು.

                     ಚಿತ್ರಕಲೆ(ರಾಷ್ಟ್ರಮಟ್ಟದ) ಪ್ರಥಮ ಮುರಳಿಕೃಷ್ಣ 9 ನೆ ತರಗತಿ, ರಾಜ್ಯಮಟ್ಟದಲ್ಲಿ ಆದಿತ್ಯ 7 ನೆ ತರಗತಿ, ದ್ವಿತೀಯ ಭವಿಷ್ 4 ನೆ ತರಗತಿ, ಜಿಲ್ಲಾಮಟ್ಟದಲ್ಲಿ ರಕ್ಷಾ ಎನ್ 1 ನೆ ತರಗತಿ, ದ್ವಿತೀಯ- ನಿಹಾಲ್ ಸಿ.ಎಚ್.ಎರಡನೇ ತರಗತಿ, ಪ್ರಜ್ವಿತ ಮೂರನೆ ತರಗತಿ,ಧನ್ವಿ 4ನೇ ತರಗತಿ, ಸೈನ್ಸ್ ಹಾಗೂ ಲೆಕ್ಕ, ಡ್ರಾಯಿಂಗ್   ದೀಪಕ್ 4 ನೆ ತರಗತಿ. ಕೆ.ಎಲ್.ಶ್ರೀದೇವಿ 6 ನೆ ತರಗತಿ, ಸೈನ್ಸ್ ರಾಜ್ಯಮಟ್ಟದಲ್ಲಿ  ವೇದಾಂತ 4 ನೆ ತರಗತಿ, ಜಿಲ್ಲಾಮಟ್ಟದ ಸೈನ್ಸ್ ನಲ್ಲಿ ಶಾಶ್ವತ 3ನೆ ತರಗತಿ., ಜತನ್ ಸಿ.ವಿ. 9ನೆ ತರಗತಿ. ಕಣ್ಣನ್ ಕಾರ್ತಿಕೇಯನ್ 10 ನೆ ತರಗತಿ, ಲೆಕ್ಕ ರಾಜ್ಯಮಟ್ಟದಲ್ಲಿ ಶಾಶ್ವತ. ಕೆ. 5 ನೆ ತರಗತಿ, ಜಿಲ್ಲಾ ಮಟ್ಟದ ಲೆಕ್ಕದಲ್ಲಿ ಪ್ರಥಮ ವೇದಾಂತರಾವ್ ನಾಲ್ಕನೆ ತರಗತಿ, ದ್ವಿತೀಯ ಮನೀಷ್ ಕುಮಾರ್ ಪಡೆದುಕೊಂಡಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries