ತಿರುವನಂತಪುರ: ವಾರ್ಷಿಕ ಲೈಫ್ ಮಸ್ಟರಿಂಗ್ ಪೂರ್ಣಗೊಳಿಸದ ಎಲ್ಲಾ ಸೇವಾ ಪಿಂಚಣಿದಾರರ ಈ ತಿಂಗಳ ಪಿಂಚಣಿ ತಡೆಹಿಡಿಯಲು ಸರ್ಕಾರ ನಿರ್ದೇಶನ ನೀಡಿದೆ. ಮಸ್ಟರ್ ನಡೆಸಿದ ಬಳಿಕ ಪಿಂಚಣಿ ನೀಡಬೇಕೆಂದು ಟ್ರಶರಿಗಳಿಗೆ ಟ್ರಶರಿ ನಿರ್ದೇಶಕರು ಆದೇಶ ನೀಡಿದ್ದಾರೆ. ಜ.22ರ ವರೆಗೆ ಲೈಫ್ ಮಸ್ಟರಿಂಗ್ ನೀಡಲು ಪಿಂಚಣಿದಾರರಿಗೆ ಕಾಲಾವಕಾಶ ನೀಡಲಾಗಿತ್ತು. ಆ ವರೆಗೆ ಮಾಹಿತಿ ನೀಡದವರ ಪಿಂಚಣಿಯನ್ನು ಈ ತಿಂಗಳಿಂದ ತಡೆಹಿಡಿಯಲಾಗುತ್ತದೆ.
ಟ್ರೆಶರಿ ಸೇವಿಂಗ್ ಬ್ಯಾಂಕ್ (ಪಿಟಿಎಸ್ ಬಿ, ಮನಿ ಆರ್ಡರ್) ಮುಖಾಂತರ ಪಿಂಚಣಿ ಪಡೆಯುವವರು ಅವರ ಪಿಂಚಣಿ ಪೇಮೆಂಟ್ ಆರ್ಡರ್, ಪಿಟಿಎಸ್ ಬಿ ಪಾಸ್ ಬುಕ್ ಎಂಬವುಗಳ ಸಹಿತ ಆಧಾರ್, ಪ್ಯಾನ್ ಎಂಬವುಗಳ ಮೂಲಕ ಟ್ರೆಶರಿಗೆ ಹಾಜರುಪಡಿಸಿದರೆ ಅಲ್ಲಿ ಮಸ್ಟರಿಂಗ್ ನಿರ್ವಹಿಸಲಾಗುತ್ತದೆ. ಬ್ಯಾಂಕ್ ಮೂಲಕ ಪಿಂಚಣಿ ಪಡೆಯುವವರು ಬ್ಯಾಂಕ್ ಪಾಸ್ ಬುಕ್, ಮೇಲೆ ತಿಳಿಸಿದರಲ್ಲಿ ಎರಡು ಗುರುತುಪತ್ರಗಳಲ್ಲಿ ಒಂದನ್ನು ಹಾಜರುಪಡಿಸಬೇಕೆಮದು ಅಧಿಕೃತರು ತಿಳಿಸಿದ್ದಾರೆ.