ಕೀವ್: ತನ್ನ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾದೊಂದಿಗೆ ಕೊನೆಗೂ ಉಕ್ರೇನ್ ಶಾಂತಿ ಮಾತುಕತೆ ನಡೆಸಲು ಒಪ್ಪಿಗೆ ನೀಡಿದೆ.
ಕದನ ವಿರಾಮದ ಬಗ್ಗೆ ಮಾತುಕತೆ ನಡೆಸಲು ನಿರಾಕರಿಸುತ್ತಿದೆ ಎಂಬ ರಷ್ಯಾದ ಆರೋಪಗಳನ್ನು ಉಕ್ರೇನ್ ತಿರಸ್ಕರಿಸಿದ್ದು, ಸ್ವೀಕಾರಾರ್ಹವಲ್ಲದ ಷರತ್ತುಗಳನ್ನು ಹೊರತುಪಡಿಸಿ ಬೇಷರತ್ ಶಾಂತಿಮಾತುಕತೆಗೆ ತಾನು ಸಿದ್ಧ ಎಂದು ಘೋಷಣೆ ಮಾಡಿದೆ. ಉಕ್ರೇನ್ ವಾರ್ಸಾ, ಬ್ರಾಟಿಸ್ಲಾವಾ, ಬುಡಾಪೆಸ್ಟ್, ಇಸ್ತಾನ್‌ಬುಲ್ ಮತ್ತು ಬಾಕುಗಳನ್ನು ಯಾವುದೇ ಮಾತುಕತೆಗಳಿಗೆ ಸಂಭಾವ್ಯ ಪರ್ಯಾಯ ಸ್ಥಳಗಳಾಗಿ ಪ್ರಸ್ತಾಪಿಸಿದೆ.
ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಬೆಲರೂಸಿಯನ್ ನಾಯಕ ಅಲೆಕ್ಸಾಂಡರ್ ಲುಕಾಶೆಂಕೊ ನಡುವಿನ ದೂರವಾಣಿ ಕರೆಯ ನಂತರ - ಚೆರ್ನೋಬಿಲ್ ಹೊರಗಿಡುವ ವಲಯದ ಬಳಿ - ಬೆಲಾರಸ್‌ನೊಂದಿಗಿನ ತನ್ನ ಗಡಿಯಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಉಕ್ರೇನ್ ಘೋಷಿಸಿದೆ.
ಉಕ್ರೇನ್ ಈ ಹಿಂದೆ ಬೆಲಾರಸ್‌ನಲ್ಲಿ ಶಾಂತಿ ಸಭೆಯ ಕುರಿತ ರಷ್ಯಾ ಪ್ರಸ್ತಾಪವನ್ನು ತಿರಸ್ಕರಿಸಿತ್ತು, ಇದು ಉಕ್ರೇನ್ ಮೇಲೆ ದಾಳಿ ಮಾಡಲು ರಷ್ಯಾದ ಪಡೆಗಳಿಗೆ ಅವಕಾಶ ಮಾಡಿಕೊಟ್ಟಿತು.
ಮತ್ತೊಂದೆಡೆ ರಷ್ಯಾದ ಸೈನಿಕರೊಂದಿಗಿನ ಬೀದಿ ಕಾಳಗದ ನಂತರ ಉಕ್ರೇನಿಯನ್ ಪಡೆಗಳು ತಮ್ಮ ಎರಡನೇ ನಗರವಾದ ಖಾರ್ಕಿವ್‌ನ ಸಂಪೂರ್ಣ ನಿಯಂತ್ರಣವನ್ನು ಭಾನುವಾರ ಪಡೆದುಕೊಂಡಿವೆ ಎಂದು ಸ್ಥಳೀಯ ಗವರ್ನರ್ ಹೇಳಿದ್ದಾರೆ. "ಖಾರ್ಕಿವ್ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿದೆ" ಎಂದು ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಒಲೆಗ್ ಸಿನೆಗುಬೊವ್ ಟೆಲಿಗ್ರಾಮ್‌ನಲ್ಲಿ ಹೇಳಿದ್ದಾರೆ. ಇನ್ನೂ ಕೊಂಚ ಸೇನಾ ಕಾರ್ಯಾಚರಣೆ ಮುಂದಾಗಿದ್ದು, ಸೈನ್ಯವು ರಷ್ಯಾದ ಪಡೆಗಳನ್ನು ಹೊರಹಾಕುತ್ತಿದೆ ಎಂದು ಹೇಳಿದರು.