ಕಣ್ಣೂರು:ವಿವಾಹ ಸಂಭ್ರಮದ ನೆಪದಲ್ಲಿ ಆಶ್ಲೀಲತೆ, ಸಾಮಾಜಿಕ ಅಸ್ತಿರತೆ ಸೃಷ್ಟಿಸಲು ಇನ್ನು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಣ್ಣೂರು ತೋಟಂನಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ತಳಿಪರಂಬ ಪೊಲೀಸರು ಈ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಹೊರಡಿಸಿರುವ ಸುತ್ತೋಲೆ ಪ್ರಕಾರ, ವಿವಾಹ ಸಮಾರಂಭದಲ್ಲಿ ಇನ್ನು ಧ್ವನಿವರ್ಧಕಗಳನ್ನು ಕರ್ಕಶವಾಗಿ ಬಳಸುವಂತಿಲ್ಲ.
ವಿವಾಹ ಸಮಾರಂಭಗಳಲ್ಲಿ ಅಮಲು ಪದಾರ್ಥಗಳ ಬಳಕೆ ಹೆಚ್ಚಾಗುತ್ತಿದೆ. ಮತ್ತು ಅನೇಕ ಆಚರಣೆಗಳು ಅಶ್ಲೀಲವಾಗಿ ಬದಲಾಗುತ್ತಿವೆ. ಇದು ಸುಸಂಸ್ಕೃತ ಸಮಾಜಕ್ಕೇ ಮಾಡಿದ ಅವಮಾನ. ಅಂತಹ ಪ್ರವೃತ್ತಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಸಮಾಜದ ಒಳಿತಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾಹ ಸಮಾರಂಭಗಳ ಮೇಲಿನ ನಿರ್ಬಂಧಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಜಾರಿಗೊಳಿಸಲಾಗುವುದು. ಯುವಕರು ಕ್ಯೆಜೋಡಿಸುವಂತೆ ಪೊಲೀಸರು ಕೋರಿದರು. ವಾರ್ಡ್ ಮಟ್ಟದಲ್ಲಿ ವಾರ್ಡ್ ಸದಸ್ಯರು ಮತ್ತು ಜಾಗೃತ ಸಮಿತಿಯವರು ನೋಡಿಕೊಳ್ಳುತ್ತಾರೆ. ಅವ್ಯವಹಾರ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ತಳಿಪರಂಬ ಉಪ ಪೊಲೀಸ್ ವರಿಷ್ಠಾಧಿಕಾರಿ ಟಿ.ಕೆ.ರತ್ನಕುಮಾರ್ ತಿಳಿಸಿದ್ದಾರೆ.