ಕಾಸರಗೋಡು: ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿದ್ಯಾಲಯ ನೀಲೇಶ್ವರ ಕೇಂದ್ರದಲ್ಲಿ ಶಿವರಾತ್ರಿ ಶಿವ ಜಯಂತಿಯನ್ನು ಆಚರಿಸಲಾಯಿತು.
ನೀಲೇಶ್ವರ ನಗರಸಭಾ ಸದಸ್ಯ ಇ.ಶಜೀರ್ ಉದ್ಘಾಟಿಸಿದರು. ಕಾಞಂಗಾಡು ಕೇಂದ್ರದ ಪ್ರಭಾರಿ ಬ್ರಹ್ಮಕುಮಾರಿ ಆಶಾ ಅಧ್ಯಕ್ಷತೆ ವಹಿಸಿ ಶಿವರಾತ್ರಿ ಸಂದೇಶ ನೀಡಿದರು. ನೀಲೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಎ.ಕೆ.ವಿನೋದ್ ಕುಮಾರ್, ಪೂರ್ವ ಕೊಝುವಲ್ ಎನ್.ಎಸ್.ಎಸ್.ಕರಯೋಗಂ ಜಂಟಿ ಕಾರ್ಯದರ್ಶಿ ಪ್ರಭಾಕರನ್ ಮುತಿರಕ್ಕಲ್, ನೀಲೇಶ್ವರ ಪ್ರೆಸ್ ಪೋರಂ ಅಧ್ಯಕ್ಷ ಸರ್ಗಂ ವಿಜಯನ್, ಬ್ರಹ್ಮಕುಮಾರಿ ಸುಮಾ, ಬ್ರಹ್ಮಕುಮಾರಿ ಸಿಂಧು, ಬ್ರಹ್ಮಕುಮಾರಿ ಗಂಗಾ ಪ್ರಧಾನ ಭಾಷಣ ಮಾಡಿದರು.