ಕೊಚ್ಚಿ: ತಿರುವನಂತಪುರ ವಿಮಾನ ನಿಲ್ದಾಣದ ಮೂಲಕ ರಾಜತಾಂತ್ರಿಕ ಬ್ಯಾಗ್ ನಲ್ಲಿ ಚಿನ್ನಾಭರಣ ಸಾಗಿಸಲು ಯತ್ನಿಸಿದ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಪರ ವಾದಿಸುತತ್ತಿರುವ ವಕೀಲೆ ಪ್ರಕರಣ ವಾದದಿಂದ ಹಿಂದೆ ಸರಿದ ಪ್ರಸಂಗ ಇಂದು ನಡೆದಿದೆ. ಎನ್‌ಐಎ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ವಕೀಲ ಸೂರಜ್ ಟಿ ಇಳಂಜಿಕಲ್ ಅವರು ಪ್ರಕರಣದಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದರು. ಹಿಂದೆ ಸರಿಯುವ ಕಾರಣ ಸ್ಪಷ್ಟವಾಗಿಲ್ಲ.
ಇತ್ತೀಚೆಗಷ್ಟೇ ಸ್ವಪ್ನಾ ಸುರೇಶ್ ಹಾಗೂ ಸೂರಜ್ ನಡುವೆ ಭಾರೀ ಡೀಲ್ ನಡೆಸಿದ ಎನ್ನಲಾಗಿತ್ತು. ಇಂತಹ ಆರೋಪಕ್ಕೆ ಮಾಜಿ ಶಾಸಕ ಪಿ.ಸಿ.ಜಾರ್ಜ್ ಮುಂದಾಗಿದ್ದರು. ಈ ವಿಷಯದ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ ಸೂರಜ್ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ವಕೀಲರು ಸ್ವಪ್ನಾ ಅವರಿಂದ 20 ಲಕ್ಷ ರೂ. ಹಣ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಇದೀಗ ಮತ್ತೆ, ಚಿನ್ನದ ಕಳ್ಳಸಾಗಣೆ ಪ್ರಕರಣ ಸಕ್ರಿಯ ಚರ್ಚೆಯಲ್ಲಿದೆ. ಇತ್ತೀಚೆಗಷ್ಟೇ ಪ್ರಕರಣದ ಮತ್ತೊಬ್ಬ ಆರೋಪಿ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ತನಗಾದ ಅನುಭವಗಳನ್ನು ವಿವರಿಸಿ ಪುಸ್ತಕ ಬರೆದಿದ್ದರು. ಇದರಲ್ಲಿ ಸ್ವಪ್ನಾ ಸುರೇಶ್ ವಿರುದ್ಧ ಶಿವಶಂಕರ್ ಗಂಭೀರ ಆರೋಪ ಮಾಡಿದ್ದಾರೆ. ಇದರ ವಿರುದ್ಧ ಸ್ವಪ್ನಾ ಸುರೇಶ್ ತೀವ್ರ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಚಿನ್ನ ಕಳ್ಳಸಾಗಣೆ ಪ್ರಕರಣ ಮತ್ತೆ ಮುನ್ನೆಲೆಗೆ ಬರುತ್ತಿದ್ದು ನಿಗೂಢತೆ ಕುತೂಹಲ ಮೂಡಿಸಿದೆ.