ಕಾಸರಗೋಡು: ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಡಾ. ಕೆ. ಕಮಲಾಕ್ಷ ಅವರ'ಅಂಕ ಕಲಿಗಳ ವೀರಗಾಥೆ'ಕೃತಿ ಬಿಡುಗಡೆ, ಅಭಿನಂದನೆ, 'ತ್ರಿಭಾಷಾ ಪ್ರಜ್ಞೆ' ಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ಫೆ, 27ರಂದು ಬೆಳಗ್ಗೆ 10ಕ್ಕೆ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜರುಗಲಿದೆ.
ಡಾ. ಕೆ. ಕಮಲಾಕ್ಷ ಆಪ್ತ ಬಳಗ ಮತ್ತು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಂಘದ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 10ಕ್ಕೆ ವಿಶ್ರಾಂತ ಪ್ರಾಧ್ಯಾಪಕ ಡಾ. ವಸಂತ ಕುಮಾರ್ ತಾಳ್ತಜೆ ಉದ್ಘಾಟಿಸುವರು. ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸುವರು. ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ. ಎ. ಸಉಬ್ಬಣ್ಣ ರೈ ಕೃತಿ ಬಿಡುಗಡೆಗೊಳಿಸುವರು. ಡಾ. ಪಾದೆಕಲ್ಲು ವಿಷ್ಣು ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನಂತರ ಡಾ. ಕೆ. ಕಮಲಾಕ್ಷ ದಂಪತಿಗೆ ಅಭಿನಂದನೆ ನಡೆಯುವುದು. ಪೆನ್ಸಿಲ್ವೇನಿಯ ವಿಶ್ವ ವಿದ್ಯಾಲಯದ ಸಂದರ್ಶನ ಪ್ರಾಧ್ಯಾಪಕ ಪ್ರೊ. ಆರ್ವಿಯಸ್ ಸುಂದರಂ ಅಭಿನಂದಿಸುವರು.
ಈ ಸಂದರ್ಭ ನಡೆಯುವ 'ಡಾ. ಕೆ. ಕಮಲಾಕ್ಷ-ತ್ರಿಭಾಷ ಪ್ರಶ್ನೆ'ಗೋಷ್ಠಿಯಲ್ಲಿ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ ಡಾ, ಮಾಧವ ಪೆರಾಜೆ ಅವರು ಕನ್ನಡ ಪ್ರಜ್ಞೆ, ಪ್ರಾಧ್ಯಾಪಕ ಪ್ರೊ, ಮೋಹನ ಕುಂಟಾರ್ ಅವರು ಮಲಯಾಳ ಪ್ರಜ್ಞೆ, ಪೆರ್ಲ ನಾಲಂದ ಕಾಲೇಜು ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ಶೇಣಿ ಅವರು ತುಳು ಪ್ರಜ್ಞೆ ಬಗ್ಗೆ ವಿಚಾರ ಮಂಡಿಸುವರು. ಮಧ್ಯಾಹ್ನ 2.45ರಿಂದ ನಡೆಯುವ ಸ್ನೇಹ ಸಂವಾದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಡಾ. ಸುಬ್ರಹ್ಮಣ್ಯ ಕೆ. ಸಂಯೋಜನೆ ನಡೆಸುವರು. ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ 10ಕ್ಕೆ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ> ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕಿ ಟಿ.ಶಕುಂತಳಾ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.