ಮುಂಬೈ: ಕೋವಿಡ್-19 ಅಡೆತಡೆಯಿಂದಾಗಿ ಟೀಂ ಇಂಡಿಯಾ ಆಯ್ಕೆಯಲ್ಲಿ ಪ್ರಭಾವ ಬೀರುತ್ತೇನೆ ಎಂಬ ಆರೋಪ ಆಧಾರ ರಹಿತವಾದದ್ದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಕೊಹ್ಲಿ ಏಕದಿನ ನಾಯಕತ್ವದಿಂದ ವಜಾಗೊಂಡ ನಂತರ ಗಂಗೂಲಿಯನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಗಂಗೂಲಿ ಬಿಸಿಸಿಐ ನಿಯಮಗಳನ್ನು ಉಲ್ಲಂಘಿಸಿ ಆಯ್ಕೆ ಸಮಿತಿಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಆಯ್ಕೆ ಸಮಿತಿ ಸದಸ್ಯರೊಂದಿಗೆ ಗಂಗೂಲಿ, ಕೊಹ್ಲಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರನ್ನು ಭೇಟಿಯಾಗಿರುವ ಫೋಟೋ ಕೂಡಾ ವೈರಲ್ ಆಗಿತ್ತು.
ಈ ಟೀಕೆಗಳಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿರುವ ಗಂಗೂಲಿ, ನಾನು ಬಿಸಿಸಿಐ ಮುಖ್ಯಸ್ಥ, ಇಂತಹ ಸುಳ್ಳು ಸುದ್ದಿಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಬಿಸಿಸಿಐ ಬಾಸ್ ಆಗಿ ನನ್ನ ಕೆಲಸವೇನೆಂದು ನನಗೆ ಗೊತ್ತು , ಇದೀಗ ಅದೇ ರೀತಿಯಲ್ಲಿ ಮಾಡುತ್ತಿದ್ದೇನೆ. ಟೀಂ ಇಂಡಿಯಾ ಪರ 113 ಟೆಸ್ಟ್ ಪಂದ್ಯಗಳು ಸೇರಿದಂತೆ 424 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ನಿಯಮಗಳೇನು ಎಂಬುದು ನನಗೆ ಗೊತ್ತು ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಮಹಿಳಾ ಐಪಿಲ್ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಗಂಗೂಲಿ, ಪುರುಷ ಐಪಿಎಲ್ ಮಾದರಿಯಲ್ಲಿಯೇ ಮುಂದಿನ ವರ್ಷ(2023) ವೇಳೆಗೆ ಪೂರ್ಣ ಪ್ರಮಾಣದಲ್ಲಿ ಮಹಿಳಾ ಐಪಿಲ್ ಟೂರ್ನಿ ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ, ವಿದೇಶಿ ಆಟಗಾರ್ತಿಯರಿಗೂ ಆಹ್ವಾನ ನೀಡಲು ಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.
ಟೀಂ ಇಂಡಿಯಾ ಪರ ಆಡುವ ಪುರುಷರಿಗೆ ಬೇರೆ ಯಾವುದೇ ಲೀಗ್ ನಲ್ಲಿ ಆಡಲು ಬಿಸಿಸಿಐ ಅವಕಾಶ ನೀಡಿಲ್ಲ. ಆದರೆ, ಇತರೆ ದೇಶಗಳಲ್ಲಿ ಟಿ-20 ಲೀಗ್ ಗಳಲ್ಲಿ ಭಾಗವಹಿಸಲು ಮಹಿಳೆಯರಿಗೆ ಖಂಡಿತವಾಗಿಯೂ ಅನುಮತಿ ಇದೆ. ಆಸ್ಟ್ರೇಲಿನ್ ಕ್ರಿಕೆಟ್ ಅತಿಥ್ಯ ವಹಿಸುವ ಬಿಬಿಎಲ್ ನ ಭಾರತೀಯ ಭಾರತೀಯ ಮಹಿಳಾ ಆಟಗಾರರು ನ್ಯೂಜಿಲೆಂಡ್ ಸೂಪರ್ ಲೀಗ್ ನಲ್ಲಿ ಆಡುತ್ತಾರೆ ಎಂದು ಗಂಗೂಲಿ ತಿಳಿಸಿದರು.