ಕಾಸರಗೋಡು: ಜಲಸಂರಕ್ಷಣೆಗೆ ಆದ್ಯತೆ ಕಲ್ಪಿಸಿರುವ ಕಾಸರಗೋಡು ಜಿಲ್ಲಾ ಪಂಚಾಯಿತಿ 2022-23ನೇ ಸಾಲಿನಲ್ಲಿ 2.61ಕೋಟಿ ರೂ. ಮೀಸಲಿರಿಸಿದೆ.
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿರುವ ಸಾರ್ವಜನಿಕ ಕೆರೆಗಳು, ಬಂಜರುಭೂಮಿಯಲ್ಲಿನ ಜಲಾಶಯಗಳು, ತೋಡುಗಳು, ಕಾಸರಗೋಡಿನ ಪಾರಂಪರಿಕ ಜಲಸಂರಕ್ಷಣಾ ಕೇಂದ್ರಗಳಾದ ಹಳ್ಳ, ಮದಗಗಳ ಅಭಿವೃದ್ಧಿಗೆ ಈ ಹಣ ವಿನಿಯೋಗವಾಗಲಿದೆ. ಒಟ್ಟು 2.65ಕೋಟಿ ರೂ. ಮೊತ್ತದ ಯೋಜನೆಗೆ ಅಂಗೀಕಾರ ಲಭಿಸಿದ್ದು, ಇದರಲ್ಲಿ 2.30ಕೋಟಿ ರೂ. ಮೊತ್ತದ ಯೋಜನೆ ಕಾಮಗಾರಿ ಜಾರಿಯಲ್ಲಿದೆ. ಉಳಿದ ಕಾಮಗಾರಿ ಏಪ್ರಿಲ್ ತಿಂಗಳಲ್ಲಿ ಆರಂಭಿಸಿ, ಶೀಘ್ರ ಕೆಲಸ ಪೂರ್ತಿಗೊಳಿಸಲಾಗುವುದು ಎಂದು ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಣ್ಮಕಜೆಯ ಕೂರ್ಲುಗಯ ಶಿರಿಯಹೊಳೆ ತಡೆಗೋಡೆ ನಿರ್ಮಾಣಕ್ಕೆ 15ಲಕ್ಷ ರೂ, ಬದಿಯಡ್ಕ ಪಂಚಾಯಿತಿಯ ಮಾನ್ಯ ಬಯಲು ತೋಡು ಸಂರಕ್ಷಣಾ ಗೋಡೆಗೆ 15ಲಕ್ಷ ರೂ, ಬಂಬ್ರಾಣ ಪೇಟೆ ಕೆರೆ ಅಭಿವೃದ್ಧಿಗೆ 10ಲಕ್ಷ ರೂ. ಯೋಜನೆಯಲ್ಲಿ ಒಳಗೊಂಡಿದೆ.