ನವದೆಹಲಿ :ಕೋವಿಡ್-19 ಹಿನ್ನೆಲೆಯಲ್ಲಿ ಏಕಾಂಗಿಯಾಗಿ ವಾಹನ ಚಾಲನೆ ಮಾಡುವಾಗ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವ ದಿಲ್ಲಿ ಸರಕಾರದ ಆದೇಶವನ್ನು ದಿಲ್ಲಿ ಹೈಕೋರ್ಟ್ ಮಂಗಳವಾರ "ಅಸಂಬದ್ಧ" ಎಂದು ಬಣ್ಣಿಸಿದೆ ಹಾಗೂ ಈ ನಿರ್ಧಾರ ಇನ್ನೂ ಏಕೆ ಚಾಲ್ತಿಯಲ್ಲಿದೆ ಎಂದು ಪ್ರಶ್ನಿಸಿದೆ.

'ಇದು ದಿಲ್ಲಿ ಸರ್ಕಾರದ ಆದೇಶ, ನೀವು ಅದನ್ನು ಏಕೆ ಹಿಂತೆಗೆದುಕೊಳ್ಳಬಾರದು. ಇದು ವಾಸ್ತವವಾಗಿ ಅಸಂಬದ್ಧವಾಗಿದೆ. ನೀವು ನಿಮ್ಮ ಸ್ವಂತ ಕಾರಿನಲ್ಲಿ ಕುಳಿತಿದ್ದೀರಿ ಹಾಗೂ ನೀವು ಮಾಸ್ಕ್ ಧರಿಸಬೇಕೇ? ಎಂದು ಪೀಠ ಪ್ರಶ್ನಿಸಿದೆ.
'ಈ ಆದೇಶ ಏಕೆ ಚಾಲ್ತಿಯಲ್ಲಿದೆ? ಸೂಚನೆಗಳನ್ನು ತೆಗೆದುಕೊಳ್ಳಿ,' ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರ ಪೀಠವು ದಿಲ್ಲಿ ಸರಕಾರಿ ವಕೀಲರಿಗೆ ತಿಳಿಸಿದೆ.