ನವದೆಹಲಿ :ಭಾರತ ಇಂದು ಉಕ್ರೇನ್‌ನಲ್ಲಿರುವ ತನ್ನ ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಉಳಿಯಲು ಅನಿವಾರ್ಯವಲ್ಲದ ವಿದ್ಯಾರ್ಥಿಗಳಿಗೆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವುದನ್ನು ಪರಿಗಣಿಸುವಂತೆ ಸಲಹೆ ನೀಡಿದೆ.
ನವದೆಹಲಿ :ಭಾರತ ಇಂದು ಉಕ್ರೇನ್‌ನಲ್ಲಿರುವ ತನ್ನ ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಉಳಿಯಲು ಅನಿವಾರ್ಯವಲ್ಲದ ವಿದ್ಯಾರ್ಥಿಗಳಿಗೆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವುದನ್ನು ಪರಿಗಣಿಸುವಂತೆ ಸಲಹೆ ನೀಡಿದೆ.
"ಉಕ್ರೇನ್‌ನಲ್ಲಿನ ಸದ್ಯದ ಅನಿಶ್ಚಿತತೆ ಪರಿಸ್ಥಿತಿಯ ದೃಷ್ಟಿಯಿಂದ ಭಾರತೀಯ ಪ್ರಜೆಗಳು, ನಿರ್ದಿಷ್ಟವಾಗಿ ಉಳಿಯಲು ಅನಿವಾರ್ಯವಲ್ಲದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಹೊರಡಲು ಪರಿಗಣಿಸಬಹುದು" ಎಂದು ಕೈವ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ಆಕ್ರಮಣದಿಂದಾಗಿ ಉದ್ವಿಗ್ನತೆ ಹೆಚ್ಚುತ್ತಿರುವಾಗ ಭಾರತವು ಈ ಸಲಹೆ ನೀಡಿದೆ.
ಕಳೆದ ಕೆಲವು ದಿನಗಳಲ್ಲಿ ಹಲವಾರು ದೇಶಗಳು ಉಕ್ರೇನ್‌ನಲ್ಲಿರುವ ತಮ್ಮ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿತಗೊಳಿಸುತ್ತಿವೆ ಹಾಗೂ ದೇಶವನ್ನು ತೊರೆಯುವಂತೆ ತಮ್ಮ ನಾಗರಿಕರನ್ನು ಒತ್ತಾಯಿಸಿವೆ.
ಉಕ್ರೇನ್ ತೊರೆಯಲು ತಮ್ಮ ಪ್ರಜೆಗಳಿಗೆ ಕರೆ ನೀಡಿರುವ ದೇಶಗಳಲ್ಲಿ ಅಮೆರಿಕ, ಜರ್ಮನಿ, ಇಟಲಿ, ಬ್ರಿಟನ್, ಐರ್ಲೆಂಡ್, ಬೆಲ್ಜಿಯಂ, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ಕೆನಡಾ, ನಾರ್ವೆ, ಎಸ್ಟೋನಿಯಾ, ಲಿಥುವೇನಿಯಾ, ಬಲ್ಗೇರಿಯಾ, ಸ್ಲೊವೇನಿಯಾ, ಆಸ್ಟ್ರೇಲಿಯಾ, ಜಪಾನ್, ಇಸ್ರೇಲ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗಳು ಸೇರಿವೆ.