ನವದೆಹಲಿ: ಏಯ್ಡ್ಸ್ ಪೀಡಿತ ಮಹಿಳೆಯೊಬ್ಬರು ಕಾಂಡಕೋಶ ಕಸಿಯಿಂದ ಗುಣಮುಖರಾಗಿದ್ದಾರೆ. ಮಾತ್ರವಲ್ಲ ಸ್ಟೆಮ್ ಸೆಲ್ ಟ್ರಾನ್ಸ್ಪ್ಲಾಂಟ್ನಿಂದಾಗಿ ಏಯ್ಡ್ಸ್ನಿಂದ ಗುಣಮುಖಗೊಂಡ ಜಗತ್ತಿನ ಪ್ರಪ್ರಥಮ ಮಹಿಳೆ ಎಂಬ ಖ್ಯಾತಿಗೂ ಈಕೆ ಪಾತ್ರರಾಗಿದ್ದಾರೆ.
ನವದೆಹಲಿ: ಏಯ್ಡ್ಸ್ ಪೀಡಿತ ಮಹಿಳೆಯೊಬ್ಬರು ಕಾಂಡಕೋಶ ಕಸಿಯಿಂದ ಗುಣಮುಖರಾಗಿದ್ದಾರೆ. ಮಾತ್ರವಲ್ಲ ಸ್ಟೆಮ್ ಸೆಲ್ ಟ್ರಾನ್ಸ್ಪ್ಲಾಂಟ್ನಿಂದಾಗಿ ಏಯ್ಡ್ಸ್ನಿಂದ ಗುಣಮುಖಗೊಂಡ ಜಗತ್ತಿನ ಪ್ರಪ್ರಥಮ ಮಹಿಳೆ ಎಂಬ ಖ್ಯಾತಿಗೂ ಈಕೆ ಪಾತ್ರರಾಗಿದ್ದಾರೆ.
ಯುಎಸ್ನ ಡೆನ್ವರ್ನಲ್ಲಿ ನಡೆದ ರೆಟ್ರೊವೈರಸಸ್ ಆಯಂಡ್ ಅಪಾರ್ಚುನಿಸ್ಟಿಕ್ ಇನ್ಫೆಕ್ಷನ್ಸ್ ಎಂಬ ಸಮ್ಮೇಳನದಲ್ಲಿ ಮಂಗಳವಾರ ಈ ಕುರಿತ ಪ್ರಕರಣವನ್ನು ಮಂಡಿಸಲಾಗಿದೆ.
ಮಿಶ್ರಜನಾಂಗದ ಮಧ್ಯವಯಸ್ಕ ಈ ಮಹಿಳೆ ಆಯಂಟಿರೆಟ್ರೊವೈರಲ್ ಥೆರಪಿಯ ಅಗತ್ಯವಿರದೆ ಕಾಂಡಕೋಶ ಕಸಿಯಿಂದ ಎಚ್ಐವಿ ಮುಕ್ತರಾಗಿದ್ದಾರೆ. ಹೀಗೆ ಮಹಿಳೆಯೊಬ್ಬರು ಗುಣಮುಖರಾಗಿರುವುದು ಇದೇ ಪ್ರಥಮ ಎಂದು ಇಂಟರ್ನ್ಯಾಷನಲ್ ಏಯ್ಡ್ಸ್ ಸೊಸೈಟಿಯ ಚುನಾಯಿತ ಅಧ್ಯಕ್ಷರಾದ ಶರೊನ್ ಲೆವಿನ್ ತಿಳಿಸಿದ್ದಾರೆ. ಈ ಹಿಂದೆ ಇದೇ ಚಿಕಿತ್ಸೆಯಲ್ಲಿ ಇಬ್ಬರು ಪುರುಷರು ಏಯ್ಡ್ಸ್ನಿಂದ ಗುಣವಾಗಿದ್ದರು ಎಂದೂ ಅವರು ಹೇಳಿದ್ದಾರೆ.