ಚಿಲಿ: ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ. ಕೊನೆಯ ಪಕ್ಷ ಒಂದು ದಿನವಾದರೂ ಎಲ್ಲರೂ ತಮ್ಮ ತಮ್ಮ ಮಾತೃಭಾಷೆಯ ಕುರಿತು ಹೆಮ್ಮೆ ಪಡುವಂತಾಗಲಿ ಎನ್ನುವುದು ಈ ದಿನದ ವಿಶೇಷ. ಆದರೆ ಚಿಲಿ ದೇಶದಲ್ಲಿ ಇದೇ ದಿನದಂದು ವಿಶಿಷ್ಟ ಮಹಿಳೆಯೊಬ್ಬರ ನಿಧನವಾಗಿದೆ.
ಚಿಲಿ: ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ. ಕೊನೆಯ ಪಕ್ಷ ಒಂದು ದಿನವಾದರೂ ಎಲ್ಲರೂ ತಮ್ಮ ತಮ್ಮ ಮಾತೃಭಾಷೆಯ ಕುರಿತು ಹೆಮ್ಮೆ ಪಡುವಂತಾಗಲಿ ಎನ್ನುವುದು ಈ ದಿನದ ವಿಶೇಷ. ಆದರೆ ಚಿಲಿ ದೇಶದಲ್ಲಿ ಇದೇ ದಿನದಂದು ವಿಶಿಷ್ಟ ಮಹಿಳೆಯೊಬ್ಬರ ನಿಧನವಾಗಿದೆ.
93 ವರ್ಷದ ಕ್ರಿಸ್ಟೀನಾ ಕಲ್ಡೇರಾನ್ ವಿಶೇಷತೆ ಏನಾಗಿತ್ತು ಎಂದರೆ ಇವರು ಯಾಗನ್ ಸಮುದಾಯದ ಯಮನ ಭಾಷೆಯನ್ನು ಬಲ್ಲವರಾಗಿದ್ದರು. ದುರದೃಷ್ಟ ಎಂದರೆ ಇವರನ್ನು ಬಿಟ್ಟರೆ ಯಾಗನ್ ಸಮುದಾಯದ ಮಾತೃಭಾಷೆಯಾಗಿದ್ದ ಯಮನವನ್ನು ಬಲ್ಲವರು ಯಾರೂ ಇಲ್ಲವಂತೆ 2003ರಲ್ಲಿ ಇವರ ಅಕ್ಕ ಮೃತಪಟ್ಟಿದ್ದರು. ಇವರಿಬ್ಬರನ್ನು ಬಿಟ್ಟರೆ ಈ ಭಾಷೆಯನ್ನು ಬಲ್ಲವರು ಬೇರೆ ಯಾರೂ ಇಲ್ಲ ಎನ್ನಲಾಗಿದೆ. ಇದೀಗ ಕ್ರೀಸ್ಟೀನಾ ಸಾವಿನೊಂದಿಗೆ ಭಾಷೆಯೊಂದರ ಅಂತ್ಯವಾಗಿದೆ!
ದಕ್ಷಿಣ ಅಮೆರಿಕದ ಚಿಲಿ ದೇಶಕ್ಕೆ ಸಂಬಂಧಿಸಿದ ಪ್ರಾಚೀನ ಭಾಷೆ ಇದಾಗಿದೆ. ಅರ್ಜೆಂಟೀನಾ ಮತ್ತು ಚಿಲಿಯ ನಡುವಿನ ಟಿಯೆರಾ ಡೆಲ್ ಫ್ಯೂಗೊ ಎಂಬ ದ್ವೀಪದಲ್ಲಿ ವಾಸಿಸುವ ಮೂಲನಿವಾಸಿಗಳು ಯಮನ ಭಾಷೆಯನ್ನು ಮಾತನಾಡುತ್ತಿದ್ದರು. ಇವರು ತಮ್ಮ ಭಾಷೆಯನ್ನು ಉಳಿಸುವುದಕ್ಕಾಗಿ ಸ್ಪ್ಯಾನಿಷ್ ಭಾಷೆಯಲ್ಲಿ ಅನುವಾದಗಳೊಂದಿಗೆ ನಿಘಂಟನ್ನು ಸಿದ್ಧಪಡಿಸಿದ್ದಾರೆ. ಆದರೆ ಅದರಲ್ಲಿ ಯಾರೂ ಉತ್ಸುಕತೆ ತೋರಿದಂತಿಲ್ಲ. ಆದ್ದರಿಂದ ಇಂದಿನವರೆಗೆ ಯಾರೂ ಈ ಭಾಷೆಯನ್ನು ಕಲಿತಿಲ್ಲ. ಮುಂದಿನ ಪೀಳಿಗೆಯಲ್ಲಿ ಯಾರಾದರೂ ಆಸಕ್ತಿ ತೋರಿದರಷ್ಟೇ ಮತ್ತೊಮ್ಮೆ ಯಮನ ಭಾಷೆಯ ಉದಯ ಆಗಲಿದೆ.
ಇವರಿಗೆ ಮಗಳಿದ್ದು, ಅವರು ಕೂಡ ಯಮನ ಭಾಷೆ ಕಲಿತಿಲ್ಲ. ಈ ಬಗ್ಗೆ ಮಾತನಾಡಿರುವ ಅವರು, ಯಗನ್ ಸಮುದಾಯದ ಹೊಸ ತಲೆಮಾರುಗಳು ಯಮನ ಭಾಷೆಯನ್ನು ಕಲಿಯುವುದನ್ನು ನಿಲ್ಲಿಸಿದ್ದಾರೆ, ಏಕೆಂದರೆ ಇದು ಅತ್ಯಂತ ಕಷ್ಟಕರವಾಗಿದೆ ಮತ್ತು ಅದರ ಪದಗಳ ಮೂಲವನ್ನು ನಿರ್ಧರಿಸುವುದು ಕಷ್ಟವಾಗಿದೆ ಎಂದಿದ್ದಾರೆ.