ಮಲಪ್ಪುರಂ: ವಿವಾಹ ಸಮಾರಂಭದಲ್ಲಿ ನಾವು ಪರಸ್ಪರ ಭೇಟಿಯಾದರೂ, ರಾಜಕೀಯ ಚರ್ಚೆ ಕೆ.ಟಿ.ಜಲೀಲ್ ಜತೆ ನಡೆಸಿಲ್ಲ ಎಂದು ಮುಸ್ಲಿಂ ಲೀಗ್ ಕಾರ್ಯದರ್ಶಿ ಪಿ.ಕೆ.ಕುನ್ಹಾಲಿಕುಟ್ಟಿ ಹೇಳಿದ್ದಾರೆ. ಆಕಸ್ಮಿಕ ಭೇಟಿಯ ಹೊರತು ಅದರಾಚೆಗೆ ಏನೂ ಇರಲಿಲ್ಲ. ಇಷ್ಟೇ ನಡೆದಿದೆ ಎಂದು ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಪಿಎಂಎ ಸಲಾಂ ಹೇಳಿದ್ದಾರೆ. ವೈಯಕ್ತಿಕವಾಗಿ ಯಾರಿಗೂ ದ್ವೇಶಗಳಿಲ್ಲ. ಜಲೀಲ್ ಅವರನ್ನು ಟೀಕಿಸಿದರೆ ಅದಕ್ಕೆ ಪ್ರತಿಯಾಗಿ ಟೀಕೆ ಮಾಡುತ್ತಾರೆ ಎಂದರು. ಹೊರಹಾಕಲ್ಪಟ್ಟವರು ಹೊರಗಿದ್ದಾರೆ ಎಂದು ಅವರು ನೆನಪಿಸಿದರು.
ಅಕ್ರಮ ಹಣ ವರ್ಗಾವಣೆ ಆರೋಪವನ್ನು ಹಿಂಪಡೆಯಲು ಪಿಕೆ ಕುನ್ಹಾಲಿಕುಟ್ಟಿ ಅವರು ಕೆಟಿ ಜಲೀಲ್ ಅವರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ ಎಂದು ಆರೋಪಗಳು ಕೇಳಿಬಂದ ನಂತರ ಲೀಗ್ ವಿವರಣೆ ನೀಡಿದೆ.