ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳ ಹಿನ್ನೆಲೆಯಲ್ಲಿ ದೇಗುಲು ಸಮುಚ್ಛಯದಲ್ಲಿ ನೂತನ ಶ್ರೀ ವೀರಭದ್ರ ಗುಡಿಯ ನಿರ್ಮಾಣಕ್ಕೆ ಪಾದುಕಾನ್ಯಾಸ ಕಾರ್ಯಕ್ರಮ ಜರುಗಿತು.
ಖ್ಯಾತ ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ನಿರ್ಮಾಣಕಾರ್ಯ ನಡೆಯುತ್ತಿದೆ. ಮಧೂರು ದೇಗುಲದ ಮುಖ್ಯ ಅರ್ಚಕ ವಿ. ಶ್ರೀಕೃಷ್ಣ ಉಪಾಧ್ಯಾಯ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಂ. ಬಾಬು, ದೇವಸ್ಥಾನ ನವೀಕರಣ ಸಮಿತಿಯ ಯು. ಟಿ ಆಳ್ವ, ಜಯದೇವ ಖಂಡಿಗೆ, ಡಾ. ಬಿ.ಎಸ್ ರಾವ್, ಮುರಳಿ ಗಟ್ಟಿ, ಮಂಜುನನಾಥ ಕಾಮತ್ ಉಪಸ್ಥಿತರಿದ್ದರು.