ಕಾಸರಗೋಡು: ಅಣಂಗೂರಿನ ಹಳೇ ಹೆದ್ದಾರಿ ಜಾಗದಲ್ಲಿ ರಸ್ತೆ ಮುಚ್ಚಿ ಸರ್ಕಾರಿ ಕಚೇರಿ ನಿರ್ಮಿಸಲು ಮುಂದಾದ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ಪ್ರತಿ¨ಭಟನೆಗೆ ಮುಂದಾಗಿದ್ದಾರೆ. ಈ ಪ್ರದೇಶದಲ್ಲಿ ಕ್ರೈಂ ಬ್ರಾಂಚ್‍ನ ಕಚೇರಿ ನಿರ್ಮಿಸಲು ತೀರ್ಮಾನಿಸಲಾಗಿದ್ದು, ರಸ್ತೆಯನ್ನು ಅಗೆದು ಸಮತಟ್ಟುಗೊಳಿಸಿ, ಸಾಮಗ್ರಿಗಳನ್ನು ತಂದಿಳಿಸುತ್ತಿದ್ದಂತೆ ಸ್ಥಳೀಯ ನಾಗರಿಕರು ಒಟ್ಟಸೇರಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಗೆ ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷ, ನಗರಸಭಾ ಪ್ರತಿಪಕ್ಷ ಮುಖಂಡ ಪಿ.ರಮೇಶ್ ನೇತೃಥ್ವ ನೀಡಿದ್ದರು. ಹಳೇ ರಸ್ತೆಗೆ ಬದಲಿಯಾಗಿ ಹೊಸ ರಸ್ತೆ ನಿರ್ಮಿಸಿದ ನಂತರ ಕಟ್ಟಡ ನಿರ್ಮಿಸಿದರೆ ಸಾಕು. ನೂರಾರು ವಾಹನಗಳು ಸಂಚರಿಸುವ ಪ್ರಸಕ್ತ ರಸ್ತೆಯನ್ನು ಮುಚ್ಚಿದಲ್ಲಿ ಈ ಪ್ರದೇಶದ ಹಲವು ಕುಟುಂಬಗಳು ರಸ್ತೆಸೌಕರ್ಯದಿಂದ ವಂಚಿತರಾಗಲಿದ್ದು, ಸರ್ಕಾರದ ಕ್ರಮಕ್ಕೆ ಆಸ್ಪದ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಹರೀಶ್ ಕುಮಾರ್, ಎ. ಸತೀಶ್, ಭಾಸ್ಕರ್, ಸೂರಜ್ ಶೆಟ್ಟಿ, ರಾಧಾಕೃಷ್ಣ, ವೇಣುಗೋಪಾಲ್, ಬಾಲಕೃಷ್ಣ, ಜಾಹ್ನವಿ, ಅಜಿತ್ ಮುಂತಾದವರು ಉಪಸ್ಥಿತರಿದ್ದರು.