ಮುಳ್ಳೇರಿಯ: ರಾಜ್ಯ ಕೃಷಿ ಇಲಾಖೆ ನೀಡುವ ಜಿಲ್ಲೆಯಲ್ಲಿಯೇ ಸಂಪೂರ್ಣ ಸಾವಯವ ಕೃಷಿ ಪಂಚಾಯಿತಿ ಎಂಬ ಪ್ರಶಸ್ತಿ ಈಸ್ಟ್ ಎಳೇರಿ ಗ್ರಾಮ ಪಂಚಾಯಿತಿಗೆ ಲಭಿಸಿದೆ. ಪಂಚಾಯತಿ ಅಧ್ಯಕ್ಷ ಜೇಮ್ಸ್ ಪಂಡಮಕ್ಕಲ್ ಅವರು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಸಾವಯವ ಕೃಷಿಯ ವಿಸ್ತರಣೆಗಾಗಿ ಪಂಚಾಯತಿ ಮಾಡಿದ ಕಾರ್ಯವನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಪಂಚಾಯತಿಯ ಶೇ.71 ಭಾಗಗಳಲ್ಲಿ ಜೈವ ಕೃಷಿ ನಡೆಸಲಾಗುತ್ತಿದೆ ಎಂದು ಪಂಚಾಯತಿ ಕೃಷಿ ಅಧಿಕಾರಿ ಎಸ್. ಉಮಾ ಹೇಳಿದರು. ಪಂಚಾಯಿತಿಯಲ್ಲಿ 5040 ಹೆಕ್ಟೇರ್ ಸಾಗುವಳಿ ಭೂಮಿಯಲ್ಲಿ 3578 ಹೆಕ್ಟೇರ್‍ನಲ್ಲಿ ಸಾವಯವ ಕೃಷಿ ಅಳವಡಿಸಲಾಗಿದೆ. ಇಲ್ಲಿ ಬೆಳೆಯುವ ಮುಖ್ಯ ಬೆಳೆಗಳು ಬಾಳೆ, ಮೆಣಸು, ತೆಂಗು, ಜೀರಿಗೆ, ಅರಿಶಿನ, ಶುಂಠಿ, ಗೋಡಂಬಿ, ಆಲೂಗಡ್ಡೆ, ತರಕಾರಿಗಳು ಮತ್ತು ಅನಾನಸ್. ಇದೆಲ್ಲವನ್ನೂ ಸಾವಯವ ಕೃಷಿಯ ಮೂಲಕ ಮಾಡಲು ಪೆÇ್ರೀತ್ಸಾಹಿಸಲಾಯಿತು.
ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆ ಹಾಗೂ ಮಣ್ಣು ಸಂರಕ್ಷಣಾ ಇಲಾಖೆ ಸಹಯೋಗದಲ್ಲಿ ಸಾವಯವ ಕೃಷಿ ವಿಸ್ತರಣೆಗೆ ಯೋಜನೆ ಸಿದ್ಧಪಡಿಸಲಾಗಿದೆ. ಸಾವಯವ ಕೃಷಿ ವಿಸ್ತರಣೆಗೆ ಪಂಚಾಯತ್ ಹಲವಾರು ಕ್ರಿಯಾ ಯೋಜನೆಗಳನ್ನು ಜಾರಿಗೆ ತಂದಿದೆ. ತರಬೇತಿ ಕಾರ್ಯಕ್ರಮಗಳು, ಭೇಟಿಗಳು, ಉತ್ತಮ ಗುಣಮಟ್ಟದ ನಾಟಿ ವಸ್ತುಗಳ ವಿತರಣೆ, ಕೃಷಿ ಶಾಲೆ, ಕೃಷಿ ಜ್ಞಾನ ಕೇಂದ್ರ, ಎಸ್‍ಸಿ ವಿಭಾಗದ ವಿಶೇಷ ತರಬೇತಿ ಕಾರ್ಯಕ್ರಮಗಳು ಇತ್ಯಾದಿಗಳನ್ನು ನಡೆಸಲಾಯಿತು. ಪಂಚಾಯಿತಿಯಲ್ಲಿ ಸಾವಯವ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣೆಗೆ ಮೂರು ಕೇಂದ್ರಗಳಿವೆ. ಜೈವಿಕ ತ್ಯಾಜ್ಯ ಮರುಬಳಕೆಗಾಗಿ ಪೈಪ್ ಕಾಂಪೆÇೀಸ್ಟ್, ಅಡಿಗೆ ತ್ಯಾಜ್ಯ ಸಂಸ್ಕರಣೆ ಮತ್ತು ಸಾಕ್‍ಪಿಟ್ ನ್ನು ಬಳಸಲಾಗುತ್ತಿದೆ. ಪಂಚಾಯತ್‍ನಲ್ಲಿ ಪ್ರಸ್ತುತ 4100 ಗ್ರಾಮೀಣ ಕಾಂಪೆÇೀಸ್ಟ್ ಪಿಟ್‍ಗಳು, 225 ವರ್ಮಿಕಾಂಪೆÇೀಸ್ಟ್, 153 ಜೈವಿಕ ಅನಿಲ ಘಟಕಗಳು ಮತ್ತು 76 ಪೈಪ್ ಕಾಂಪೆÇೀಸ್ಟ್ ಸಾವಯವ ಗೊಬ್ಬರ ಉತ್ಪಾದನೆಗೆ ಇದೆ ಎಂದು ಕೃಷಿ ಅ|ಧಿಕಾರಿ ಮಾಹಿತಿ ನೀಡಿರುವರು. ಪಂಚಾಯಿತಿ ಅಧ್ಯಕ್ಷ ಜೇಮ್ಸ್ ಪಂಡಮಕ್ಕಲ್ ಹಾಗೂ ಆಡಳಿತ ಮಂಡಳಿ ಹಾಗೂ ಕೃಷಿ ಇಲಾಖೆ ಸದಸ್ಯರ ಶ್ರಮದ ಫಲವಾಗಿ ಪಂಚಾಯಿತಿಗೆ ಮನ್ನಣೆ ದೊರೆತಿದೆ.