ಕುಂಬಳೆ: ಭಾರೀ ವಿವಾದಕ್ಕೆ ಕಾರಣವಾಗಿದ್ದ ಕುಂಬಳೆ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂಬ ಬೇಡಿಕೆಗೆ ಕೊನೆಗೂ ತಾರ್ಕಿಕ ಅಂತ್ಯ ಹಾಡಲಾಗಿದೆ.
ಕುಂಬಳೆ ಗ್ರಾ.ಪಂ. ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸಿಪಿಎಂ ವಿವಾದಾತ್ಮಕ ಸದಸ್ಯ ಎಸ್.ಕೊಗ್ಗು ರಾಜೀನಾಮೆ ನೀಡಿದ್ದಾರೆ. ಆದರೆ ನ್ಯಾಯಯುತ ವಿಧಾನಗಳ ಮೂಲಕವೇ ರಾಜೀನಾಮೆ ನೀಡಬೇಕೆಂದು ಗ್ರಾ.ಪಂ.ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.
ನಿನ್ನೆ ಅಪರಾಹ್ನ ನೇರವಾಗಿ ತೆರಳದೆ ಬೇರೊಬ್ಬ ಸದಸ್ಯನ ಮೂಲಕ ರಾಜೀನಾಮೆ ಪತ್ರ ಕಳಿಸಿದ್ದರು.ಗ್ರಾ.ಪಂ. ಪ್ರಂಟ್ ಆಫೀಸ್ ಮೂಲಕ ಕಾರ್ಯದರ್ಶಿಗಳ ಬಳಿಗೆ ಆ ಅರ್ಜಿ ಹೋಗಿದ್ದರೂ ನ್ಯಾಯಯುತ ವಿಧಾನವಲ್ಲವೆಂದು ಕಾರ್ಯದರ್ಶಿ ಆ ಪತ್ರ ಸ್ವೀಕರಿಸಿರಲಿಲ್ಲ.ನೇರವಾಗಿ ಅಥವಾ ಗೆಜೆಟೆಡ್ ಅಧಿಕಾರಿಯ ದೃಢೀಕರಣದ ಮೂಲಕ ರಿಜಿಸ್ಟರ್ಡ್ ಅಂಚೆ ಮೂಲಕ ರಾಜೀನಾಮೆ ಕೋರುವುದು/ ನೀಡುವುದು ನಿಯಮವಾಗಿದೆ.
ಇಬ್ಬರು ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಸಿಪಿಎಂ ಲೋಕಲ್ ಕಮಿಟಿ ಸದಸ್ಯನಾದ ಕೊಗ್ಗು ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಪಡೆದಿದ್ದರು. ಈ ವಿಷಯಕ್ಕೆ ಸಂಬಂಧಿಸಿ ಈ ಹಿಂದೆಯೇ ಪ್ರತಿಭಟನೆ ಹುಟ್ಟಿಕೊಂಡಿತ್ತು. ಇತ್ತೀಚೆಗೆ ಬಿಜೆಪಿ ಜಿಲ್ಲಾ ಸಮಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಯುವುದರೊಂದಿಗೆ ಘಟನೆ ವಿವಾದಕ್ಕೆಡೆಯಾಗಿತ್ತು. ಬಿಜೆಪಿ ಕಾರ್ಯಕರ್ತನನ್ನು ಕೊಲೆಗೈದ ಪ್ರಕರ ಣದಲ್ಲಿಜಿಲ್ಲಾಷು಼ಊಷು ಡ ಶಿಕ್ಷೆ ವಿಧಿಸಿದ ವ್ಯಕ್ತಿಯಾಗಿರುವ ಕೊಗ್ಗು ಅವರೊಂದಿಗೆ ಸೇರಿ ಬಿಜೆಪಿ ಸ್ಥಾಯೀ ಸಮಿತಿಯಲ್ಲಿರುವುದು ಒಪ್ಪಿತವಲ್ಲವೆಂದು ಬಿಜೆಪಿಯ ಅಸಂಖ್ಯ ಕಾರ್ಯಕರ್ತರು ನೇತಾರರ ವಿರುದ್ದ ತಿರುಗಿಬಿದ್ದಿದ್ದಾರೆ. ಕೊಗ್ಗುವಿಗೆ ಶಿಕ್ಷೆಯನ್ನು ಹೈಕೋರ್ಟ್ ಸಡಿಲಿಕೆ ಯೊಂದಿಗೆ ಖಾಯಂಗೊಳಿಸಿತ್ತು.