HEALTH TIPS

ಜಿಲ್ಲಾ ಕೈಗಾರಿಕಾ ಇಲಾಖೆಯ ಎರಡು ದಿನಗಳ ಕಾರ್ಯಾಗಾರ: ಕೆಂಗಲ್ಲಿನ ಅನಂತ ಸಾಧ್ಯತೆಗಳನ್ನು ತೆರೆದಿಡುವಲ್ಲಿ ಯಶಸ್ವಿ

  

                ಕಾಸರಗೋಡು: ನೆಲದಿಂದ ಲಭಿಸುವ ಅಮೂಲ್ಯ ಸಂಪತ್ತಾಗಿರುವ ಕೆಂಗಲ್ಲಿನ ಅನಂತ ಸಾಧ್ಯತೆಗಳನ್ನು ತೆರೆದಿಡುವ ಎರಡು ದಿನಗಳ ತಾಂತ್ರಿಕ ಕಾರ್ಯಾಗಾರ ಜಿಲ್ಲಾ ಕೈಗಾರಿಕಾ ಇಲಾಖೆಯಿಂದ ಯಶಸ್ವಿಯಾಗಿ ನಡೆಯಿತು.

                    ಬಂಗಳ  ಸ್ಪ್ರಿಂಗ್‍ಡೇಲ್ ಪಬ್ಲಿಕ್ ಸ್ಕೂಲ್‍ನಲ್ಲಿ 'ರೆಡ್‍ಸ್ಟೋನ್ ಮೌಲ್ಯವರ್ಧಿತ ಉತ್ಪನ್ನ ಸಾಧ್ಯತೆಗಳು' ಕಾರ್ಯಾಗಾರವನ್ನು ಮುಕ್ತಾಯಗೊಂಡಿತು. ಐವತ್ತು ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವಸತಿ ಮತ್ತು ಕಟ್ಟಡ ಕ್ಷೇತ್ರಗಳಲ್ಲಿ ಕೆಂಪು ಮರಳುಗಲ್ಲಿನ ಸಾಮಥ್ರ್ಯವು ತುಂಬಾ ಹೆಚ್ಚಾಗಿದೆ ಎಂದು ಕಾರ್ಯಾಗಾರವು ಮೌಲ್ಯಮಾಪನ ಮಾಡಿದೆ. ಇಂದು ಹಳೆಯ ಮತ್ತು ಆಧುನಿಕತೆಯನ್ನು ಒಗ್ಗೂಡಿಸಿ ಮನೆ ಕಟ್ಟುವಾಗ ನೆಲದಿಂದ ಚಾವಣಿಯವರೆಗೂ ಕೆಂಪು ಕಲ್ಲಿನ ಪ್ರಭಾವವನ್ನು ಕಾಣಬಹುದು. 

                 ಎರಡು ದಿನಗಳ ಕಾರ್ಯಾಗಾರವು ಉದ್ಯಮಿಗಳಿಗೆ ಸಹಾಯ ಮಾಡಲು ಸಂಶೋಧನಾ ಸಂಸ್ಥೆಗಳಲ್ಲಿ ಲಭ್ಯವಿರುವ ತಂತ್ರಗಳನ್ನು ಒಳಗೊಂಡಿತ್ತು. ಭೂವಿಜ್ಞಾನಿ ಕೆ.ಆರ್.ಜಗದೀಶ್ ಅವರು ಗಣಿಗಾರಿಕೆ ಕಾನೂನು ಮತ್ತು ಅದರ ನಿಯಮಗಳ ಕುರಿತು ತರಗತಿ ನಡೆಸಿದರು.  ಎಂಟರ್‍ಪ್ರೈಸ್‍ನ ಮಾರ್ಕೆಟಿಂಗ್ ತಂತ್ರಗಳ ಕುರಿತು ವಿಸಿ. ಶಿಬು ಶೈನ್ ತರಗತಿ ನಡೆಸಿದರು.  ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ಎಂ.ವಿ.ರಾಜನ್ ಅವರು ವಾಣಿಜ್ಯೋದ್ಯಮಿಗಳಿಗೆ ಕೆಂಪು ಮರಳುಗಲ್ಲಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರಾಯೋಗಿಕ ತರಬೇತಿಯನ್ನು ನೀಡಿದರು. ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜಮೋಹನ್ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಜಿಲ್ಲಾ ಕೈಗಾರಿಕೆ ಇಲಾಖೆಯ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್ ಮಾತನಾಡಿ, ಅತ್ಯಾಧುನಿಕ ತಂತ್ರಜ್ಞಾನದ ಮಾಹಿತಿ ಪಡೆದುಕೊಳ್ಳಲು ಕಾರ್ಯಾಗಾರ ಅವಕಾಶ ಕಲ್ಪಿಸಿದೆ ಎಂದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries