ಈ ಕಾಲದಲ್ಲಿ ಇಂಟರ್‌ನೆಟ್ ಬಳಸದವರೂ ತುಂಬಾನೇ ವಿರಳ. ಓದಲು ಬರೆಯಲು ಬಾರದವರಿಗೂ ಕೂಡ ಪೇಸ್‌ಬುಕ್, ಇನ್‌ಸ್ಟಾಗ್ರಾಮ್ ಬಳಸುವುದು ಗೊತ್ತಿರುತ್ತದೆ. ಗೂಗಲ್ ಪೇ, ಪೋನ್ ಪೇ, ಆನ್‌ಲೈನ್ ಬ್ಯಾಂಕಿಂಗ್ ಹೀಗೆ ಪ್ರತಿಯೊಂದು ಹಣದ ವ್ಯವಹಾರಗಳನ್ನು ಆನ್‌ಲೈನ್ ಮೂಲಕವೇ ನಡೆಸುತ್ತೇವೆ, ಅಷ್ಟೇ ನಮ್ಮ ಎಷ್ಟೋ ಮುಖ್ಯವಾದ ದಾಖಲೆಗಳು ನಮ್ಮ ಫೋನ್‌ನಲ್ಲಿ, ಇಮೇಲ್‌ನಲ್ಲಿ ಭದ್ರವಾಗಿರುತ್ತದೆ.
ನಾವು ಇಂಟರ್‌ನೆಟ್ ಬಳಸುವಾಗ ತುಂಬಾನೇ ಎಚ್ಚರವಹಿಸಬೇಕು. ನಮ್ಮ ಮನೆಗೆ ಕಳ್ಳ ನುಗ್ಗದಿರಲು ಹೇಗೆ ಬೀಗ ಹಾಕಿ ಭದ್ರಪಡಿಸುತ್ತೇವೋ ಹಾಗೆಯೇ ಇಂಟರ್‌ನೆಟ್ ಬಳಸುವಾಗ ಸಾಮಾಜಿಕ ತಾಣಗಳಿಗೆ ಪಾಸ್‌ವರ್ಡ್ ಹಾಲಿ ಭದ್ರಪಡಿಸಬೇಕು. ಇಷ್ಟೂ ಮಾಡಿದರೂ ಕೆಲವೊಮ್ಮೆ ಸ್ಕ್ಯಾಮರ್‌ಗಳಿಂದ ತೊಂದರೆಯಾಗಬಹುದು. ಸೈಬರ್ ಕ್ರೈಮ್ ಬಗ್ಗೆ ನೀವು ಕೇಳಿರಬಹುದು. ಸೈಬರ್ ಕ್ರೈಂ ಉಂಟಾದಾಗ ಹಣ, ಮಾನ ಎರಡೂ ಹೋಗಬಹುದು ಆದ್ದರಿಂದ ತುಂಬಾನೇ ಎಚ್ಚರವಹಿಸಬೇಕು.
ಅದರಲ್ಲೂ ಹೆಣ್ಮಕ್ಕಳು ತಮ್ಮ ಫೋಟೋಗಳನ್ನು ಹಾಕುವಾಗ ತುಂಬಾ ಜಾಗ್ರತೆವಹಿಸಬೇಕು. ಫೋಟೋಗಳನ್ನು ಎಡಿಟ್ ಮಾಡಿ ಕೆಟ್ಟದಾಗಿ ಚಿತ್ರಿಸುವ ಅಪಾಯವಿದೆ, ಅಲ್ಲದೆ ಗೊತ್ತಿಲ್ಲದಿರುವ ಫ್ರೆಂಡ್ ರಿಕೆಸ್ಟ್ Accept ಮಾಡುವುದು, ಪರಿಚಯನೇ ಇಲ್ಲದಿರುವವರ ಜೊತೆ ಸ್ನೇಹ -ಪ್ರೇಮ ಎಲ್ಲವೂ ಮುಂದೆ ದೊಡ್ಡ ಕಂಟಕವನ್ನೇ ತರುವುದು, ಆದ್ದರಿಂದ ತುಂಬಾನೇ ಹುಷಾರಾಗಿರಬೇಕು.
ಫೆಬ್ರವರಿ 8ನ್ನು ಸೇಫ್ ಇಂಟರ್‌ನೆಟ್ ಡೇ ಎಂದು ಆಚರಿಸಲಾಗುವುದು. ಇಂಟರ್‌ನೆಟ್ ಅನ್ನು ಸುರಕ್ಷತೆವಾಗಿ ಬಳಸುವುದರ ಕುರಿತು ಜನರಿಗೆ ಜಾಗ್ರತೆ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು.
ನಿಮ್ಮ ಸುರಕ್ಷತೆಗಾಗಿ ಇಂಟರ್‌ನೆಟ್‌ನಲ್ಲಿ ಈ ವಿಷಯಗಳತ್ತ ಗಮನ ನೀಡಿ: ನಿಮ್ಮ ವೈಯಕ್ತಿಕ ದಾಖಲೆಗಳನ್ನು ಸ್ಟ್ರಾಂಗ್ ಪಾಸ್‌ವರ್ಡ್ ಬಳಸಿ ಸೇಫ್ ಆಗಿಡಿ. * ತುಂಬಾ ಸ್ಟ್ರಾಂಗ್ ಪಾಸ್‌ವರ್ಡ್ ಬಳಸಿ, ಬೇರೆಯವರು ಊಹಿಸಲು ಸಾಧ್ಯವಾಗದಂಥ ಪಾಸ್‌ವರ್ಡ್ ಬಳಸಿ. * ನಿಮ್ಮ ಪಾಸ್‌ವರ್ಡ್ ಆಗಾಗ ಬದಲಾಯಿಸಿ * ನಿಮ್ಮ ಪಾಸ್‌ವರ್ಡ್ ಅನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ ವೈಯಕ್ತಿಕ ಮಾಹಿತಿಗಳನ್ನು ಖಾಸಗಿಯಾಗಿಡಿ * ಆನ್‌ಲೈನ್ ನೀವು ಟರ್ಮ್ಸ್ ಹಾಗೂ ಕಂಡೀಷನ್ ಸರಿಯಾಗಿ ಓದಿ * ನಿಮ್ಮ ಆರ್ಥಿಕ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಾಕಬೇಡಿ * ನಿಮ್ಮ ಕ್ರಿಡಿಟ್ ಕಾರ್ಡ್ ಮಿಸ್ ಆದರೆ, ಮಿಸ್‌ಯೂಸ್ ಆದರೆ ಕೂಡಲೇ ಬ್ಯಾಂಕ್ ಕಾಲ್ ಮಾಡಿ ಬ್ಲಾಕ್ ಮಾಡಿಸಿ 3. ನಿಮ್ಮ ಡಿವೈಸ್ ಸೆಕ್ಯೂರ್ ಆಗಿರಲಿ * ನಿಮ್ಮ ಮೊಬೈಲ್, ಲ್ಯಾಪ್‌ಟಾಪ್ ಮುಂತಾದವುಗಳಿಗೆ ಪಾಸ್‌ವರ್ಡ್ ಬಳಸಿ. ಆ ಪಾಸ್‌ವರ್ಡ್ ಬೇರೆಯವರ ಜೊತೆ ಹಂಚಿಕೊಳ್ಳಬೇಡಿ. 4. ಸಾಫ್ಟ್‌ವೇರ್ ಅಪ್‌ಡೇಟ್ ಕಡೆ ಗಮನ ನೀಡಿ * ನಿಮ್ಮ ಡಿವೈಸ್‌ನಲ್ಲಿ ಅಟೋಮ್ಯಾಟಿಕ್ ಅಪ್‌ಡೇಟ್ ಸೆಟ್ ಅಪ್ ಮಾಡಿ. * ಸಾಫ್ಟ್‌ವೇರ್‌ಗಳನ್ನು ಸರಿಯಾಗಿ ಅಪ್‌ಡೇಟ್ ಮಾಡಿ.
ವೈಫೈ ಬಗ್ಗೆ ಜಾಗ್ರತೆ
* ಸುರಕ್ಷತೆಯಲ್ಲದ ಸಾರ್ವಜನಿಕ ವೈಫ್ ಬಳಸಬೇಡಿ
* ನಿಮ್ಮ ವೈಫ್‌ಗೆ ಸ್ಟ್ರಾಂಗ್ ಪಾಸ್‌ವರ್ಡ್ ಬಳಸಿ
* ಟಿಪ್ #1 ನೆನಪಿಡಿ ಹಾಗೂ ಆಗಾಗ ವೈಫೈ ಪಾಸ್‌ವರ್ಡ್ ಬದಲಾಯಿಸಿ.
* ಪಬ್ಲಿಕ್ ವೈಫ್ ನೆಟ್‌ವರ್ಕ್ ಬಳಸಿ ಬ್ಯಾಂಕ್ ಅಕೌಂಟ್ ಚೆಕ್ ಮಾಡುವುದು, ಬಿಲ್ ಪಾವತಿ ಮಾಡುವುದು ಮಾಡಬೇಡಿ.
* ಆ್ಯಪ್‌ಗಳನ್ನು ಅಪ್‌ಡೇಟ್ ಮಾಡಬೇಡಿ. ಔಟ್‌ಡೇಟಡ್ ಆ್ಯಪ್ ಬೇಗನೆ ಹ್ಯಾಕ್ ಆಗುವುದು.
ಆನ್‌ಲೈನ್‌ನಲ್ಲಿ ಕಳ್ಳತನವಾಗುವುದನ್ನು ತಪ್ಪಿಸುವುದು ಹೇಗೆ?
* ನಿಮ್ಮ ಕ್ರೆಡಿಟ್ ರಿಪೋರ್ಟ್ ಮಾನಿಟರ್ ಮಾಡುವುದು ಹೇಗೆ? ನಿಮ್ಮ ಫೈನಾನ್ಸ್ ಮಾಹಿತಿಯನ್ನು ಮಾನಿಟರ್ ಮಾಡಿ, ಯಾವುದೇ ಅನುಮಾನ ಬಂದರೆ ಕೂಡಲೇ ಕ್ರೆಡಿಟ್ ಕಾರ್ಡ್ ಫ್ರೀಜ್ ಮಾಡಿ. * ನಿಮ್ಮ ಸ್ಟೇಟ್‌ಮೆಂಟ್ ಗಮನಿಸಿ. ನೀವು ಬಳಸಿದ್ದಕ್ಕಿಂತ ಭಿನ್ನವಾದ ಸ್ಟೇಟ್‌ಮೆಂಟ್ ಬಂದರೆ ಕೂಡಲೇ ಎಚ್ಚೆತ್ತುಕೊಳ್ಳಿ * ಯಾರಾದರೂ ಫೋನ್ ಮಾಡಿ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿ ಕೇಳಿದರೆ ಕೊಡಬೇಡಿ, ಅವರು ಬ್ಯಾಂಕಿನವರೇ ಎಂದರೂ ಕೂಡ ಕೊಡಬೇಡಿ. * ಟ್ರಾವೆಲ್ ಮಾಡುವಾಗ ಎಲ್ಲಾ ಕಡೆ ನಿಮ್ಮ ಕಾರ್ಡ್ ಬಳಸಬೇಡಿ. ನಿಮಗೆ ಡೌಟ್ ಬಂದಲ್ಲಿ ಕ್ಯಾಶ್ ಕೊಡಿ. ನಿಮ್ಮ ಪರ್ಸ್‌ನಲ್ ಡಾಟಾ ಬ್ಯಾಕಪ್ ಮಾಡಿ ಬೇರೊಂದು ಡೈವೈಸ್‌ನಲ್ಲಿ ನಿಮ್ಮ ಪರ್ಸನಲ್ ಡಾಟಾ ಬ್ಯಾಕಪ್ ಮಾಡಿಡಿ.
ಈ 4 ಬಗೆಯ ಆನ್ಲೈನ್ ಸ್ಕ್ಯಾಮ್ ತಡೆಗಟ್ಟಿ
1. ಆನ್‌ಲೈನ್ ಡೇಟಿಂಗ್ ಸ್ಕ್ಯಾಮ್: ತುಂಬಾ ಜನರಿಗೆ ಆನ್‌ಲೈನ್ ಡೇಟಿಂಗ್‌ನಲ್ಲಿ ಮೋಸ ಆಗುತ್ತದೆ. ಆನ್‌ಲೈನ್ ಡೇಟಿಂಗ್ ಮಾಡುವಾಗ ನಿಮ್ಮ ವೈಯಕ್ತಿಕ ಹಾಗೂ ಆರ್ಥಿಕ ವಿಷಯಗಳನ್ನು ಸಂಪೂರ್ಣವಾಗಿ ಹಂಚಿಕೊಳ್ಳಬೇಡಿ. ಅವರು ನಿಮ್ಮ ಬಳಿ ನಯವಾಗಿ ನಿಮ್ಮೆಲ್ಲಾ ವಿಷಯ ತಿಳಿದುಕೊಳ್ಳುತ್ತಿದ್ದಾರೆ ಎಂದರೆ ಎಚ್ಚೆತ್ತುಕೊಳ್ಳಿ. 2. ಸೋಷಿಯಲ್ ಮೀಡಿಯಾ ಸ್ಕ್ಯಾಮ್ ಫೇಕ್ ಪ್ರೊಫೈಲ್, ಕ್ಯಾಟ್ ಫಿಶಿಂಗ್, ಗಾಸಿಪ್ ಕ್ಲಿಕ್ ಬೈಟ್, ಜಾಬ್ ಆಫರ್ ಸ್ಕ್ಯಾಮ್ ಇವೆಲ್ಲಾ ಆನ್‌ಲೈನ್ ಸ್ಕ್ಯಾಮ್‌ಗಳಾಗಿವೆ. ಯಾವುದೇ ಸಂಶಯಾಸ್ಪದ ಲಿಂಕ್ ಬಂದ್ರೆ ಓಪನ್ ಮಾಡಬೇಡಿ. ಸೆಕ್ಯೂರ್ ಅಲ್ಲದಿರುವ ಸೈಟ್‌ನಲ್ಲಿ ನಿಮ್ಮ ಮಾಹಿತಿ ತುಂಬಬೇಡಿ. 3. ಟೆಕ್ಸ್ಟ್ ಮೆಸೇಜ್ ಸ್ಕ್ಯಾಮ್ ಒಂದು ವಿಷಯ ನೆನಪಿಟ್ಟುಕೊಳ್ಳಿ ಯಾವುದೇ ಬ್ಯಾಂಕ್, ಸರ್ಕಾರದ ಸಂಸ್ಥೆಗಳು ನಿಮ್ಮ ಬಳಿ ನಿಮ್ಮ ವೈಯಕ್ತಿಕ ಮಾಹಿತಿ ಟೆಕ್ಸ್ಟ್ ಕಳುಹಿಸಿ ಕೇಳುವುದಿಲ್ಲ, ಆದ್ದರಿಂದ ನಿಮ್ಮ ಮಾಹಿತಿಗಳು ಅಂಥ ಟೆಕ್ಸ್ಟ್ಗೆ ನೀಡಲು ಹೋಗಬೇಡಿ. 4. ಇಮೇಲ್ ಮಾಡುವುದು ನಿಮಗೆ ಗಿಫ್ಟ್ ಇದೆ ಅಥವಾ ನೀವು ಬಹುಮಾನ ಗೆದ್ದಿದ್ದೀರ ಎಂಬ ಇಮೇಲ್ ಬಂದ್ರೆ ಅದಕ್ಕೆ ರಿಪ್ಲೈ ಮಾಡಲು ಹೋಗಬೇಡಿ, ಇವೆಲ್ಲಾ ಆನ್‌ಲೈನ್ ಸ್ಕ್ಯಾಮ್‌ನ ಭಾಗಗಳಾಗಿವೆ. ಇಂಥ ಸ್ಕ್ಯಾಮ್ ಬಗ್ಗೆ ಎಚ್ಚರ... ಎಚ್ಚರ!