HEALTH TIPS

ಗೂಗಲ್ ಮ್ಯಾಪ್ ಡ್ರೈವ್; ಬ್ರೇಕ್ ಬದಲಿಗೆ ವೇಗವರ್ಧಕದ ಮೇಲೆ ಕಾಲಿರಿಸಿ ನಾಲೆಗೆ ಉರುಳಿದ ಕಾರು: ಮೂವರ ದುರ್ಮರಣ

                   ಅಡೂರ್: ಕೊಲ್ಲಂನ ಅಡೂರಿನಲ್ಲಿ ಕಾರು ಚಾಲಕ ಗೂಗಲ್ ಮ್ಯಾಪ್ ನೋಡಿಕೊಂಡು ನಾಲೆಗೆ ನುಗ್ಗಿ ಅವಘಡ ಸಂಭವಿಸಿದ ಘಟನೆ ನಡೆದಿದೆ.  ಹರಿಪ್ಪಾಡ್ ಕಡೆಗೆ ತೆರಳುವ ವಾಹನ ಅಡೂರ್ ಬೈಪಾಸ್ ಜಂಕ್ಷನ್‍ನಲ್ಲಿ ಎಡಕ್ಕೆ ತಿರುಗಬೇಕು ಎಂದು ಗೂಗಲ್ ಮ್ಯಾಪ್ ತೋರಿಸುತ್ತದೆ. ಇದರೊಂದಿಗೆ ಅತಿವೇಗವಾಗಿ ಹೋಗುತ್ತಿದ್ದ ವಾಹನಕ್ಕೆ ಚಾಲಕ ಬ್ರೇಕ್ ಹಾಕಲು ಯತ್ನಿಸಿದ್ದಾನೆ. ಆದರೆ ಬ್ರೇಕ್ ಹಾಕುವ ಬದಲು ಆಕ್ಸಿಲರೇಟರ್ ಮೇಲೆ ಕಾಲಿಟ್ಟರು. ದಿಕ್ಕೆಟ್ಟ ಕಾರು ನಾಲೆಗೆ ಉರುಳಿ ಬಿತ್ತು. ಅಪಘಾತದಲ್ಲಿ ಗಾಯಗೊಂಡವರು ನೀಡಿರುವ ಹೇಳಿಕೆಯಿಂದ ಇದು ದೃಢಪಟ್ಟಿದೆ. ಅಪಘಾತಕ್ಕೂ ಮುನ್ನ ಮೊಬೈಲ್ ಪೋನ್ ನೋಡುತ್ತಿದ್ದೆ ಎಂದು ಹೇಳಿದ್ದಾರೆ.

                    ವಧುವಿಗೆ ವಿವಾಹ ವಸ್ತ್ರಗಳನ್ನು ನೀಡಲು ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಅಮಲ್ ಶಾಜಿ ಅವರ ವಿವಾಹ ಇಳಮಾಡ ಅಂಬಲಮುಕ್ಕಿನಲ್ಲಿರುವ ವಧು ಶಾನು ಮನೆಯಲ್ಲಿ ನಿನ್ನೆ ನಡೆಯಬೇಕಿತ್ತು. ವಿವಾಹ ಪೂರ್ವ ಕಾರ್ಯಕ್ರಮದ ಅಂಗವಾಗಿ ಮೊನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಮಲ್ ಅವರ ಸಂಬಂಧಿಕರು, ನೆರೆಹೊರೆಯವರು ಹಾಗೂ ಸ್ನೇಹಿತರು ಐದು ವಾಹನಗಳಲ್ಲಿ ತೆರಳಿದ್ದರು. ಅಪಘಾತದಲ್ಲಿ ವರನ ಬಂಧುಗಳು, ನೆರೆಹೊರೆಯವರಾದ ಶುಕಂಠಲಾ, ಇಂದಿರಾ ಮತ್ತು ಶ್ರೀಜಾ ಎಂಬವರು ಘಟನೆಯಲ್ಲಿ ದುರ್ಮರಣಕ್ಕೊಳಗಾದರು. ಅಪಘಾತದ ಹಿನ್ನೆಲೆಯಲ್ಲಿ ನಿನ್ನೆ ವಿವಾಹವನ್ನು ಕೇವಲ ಸೀಮಿತವಾಗಿ ನಡೆಸಲಾಯಿತು. 

                         ಶಕುಂತಲಾ ಮತ್ತು ಇಂದಿರಾ ವರನ ಹತ್ತಿರದ ಸಂಬಂಧಿಗಳು. ಶ್ರೀಜಾ ವರನ ತಾಯಿಯ ಸ್ನೇಹಿತೆ. ಸಮಾರಂಭದಲ್ಲಿ ಭಾಗವಹಿಸದಿರಲು ಶ್ರೀಜಾ ಆರಂಭದಲ್ಲಿ ನಿರ್ಧರಿಸಿದ್ದರು. ಆದರೆ ಸ್ನೇಹಿತರ ಒತ್ತಾಯಕ್ಕೆ ಮಣಿದು ಮನಸ್ಸು ಬದಲಾಯಿಸಿದ್ದರು. ಶ್ರೀಜಾ ಎಸ್ಟೇಟ್ ನಲ್ಲಿ ಟೈಲರಿಂಗ್ ಅಂಗಡಿ ನಡೆಸುತ್ತಿದ್ದರು. ಇಂದಿರಾ ಮತ್ತು ಶಕುಂತಲಾ ಗೋಡಂಬಿ ಕಾರ್ಖಾನೆಯ ಕಾರ್ಮಿಕರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries