ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ಇಂಡಿಗೋ ಸಂಸ್ಥೆಯ ಕಾರ್ಯನಿರ್ವಾಹಕರಲ್ಲದ, ಸ್ವತಂತ್ರೇತರ ನಿರ್ದೇಶಕರಾದ ರಾಕೇಶ್ ಗಂಗ್ವಾಲ್ ನಿರ್ದೇಶಕ ಮಂಡಳಿಯನ್ನು ತೊರೆದಿದ್ದು, ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ರಾಜಿನಾಮೆ ನೀಡಿದ್ದಾರೆ.
ಮೂಲಗಳ ಪ್ರಕಾರ "ಕಾರ್ಯನಿರ್ವಾಹಕರಲ್ಲದ, ಸ್ವತಂತ್ರವಲ್ಲದ ನಿರ್ದೇಶಕರಾದ ಶ್ರೀ ರಾಕೇಶ್ ಗಂಗ್ವಾಲ್ ಅವರು ಫೆಬ್ರವರಿ 18, 2022 ರಂದು ತಮ್ಮ ಪತ್ರದ ಮೂಲಕ ಕಂಪನಿಯ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ನಾವು ಈ ಮೂಲಕ ನಿಮಗೆ ತಿಳಿಸುತ್ತೇವೆ" ಎಂದು ಇಂಡಿಗೋ ಫೈಲಿಂಗ್‌ನಲ್ಲಿ ತಿಳಿಸಿದೆ.
ಶುಕ್ರವಾರ, ಇಂಡಿಗೊ ಷೇರುಗಳು ಎನ್‌ಎಸ್‌ಇಯಲ್ಲಿ 2.02% ರಷ್ಟು ಕುಸಿದು 2,113ರೂಗೆ ತಲುಪಿದವು. ಸಾಕಷ್ಟು ಚಿಂತನೆ ನಡೆಸಿದ ಬಳಿಕ ಮಂಡಳಿಯಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿರುವುದಾಗಿ ಗಂಗ್ವಾಲ್ ಹೇಳಿದ್ದಾರೆ.
Rakesh Gangwal, Non-Executive, Non-Independent Director of IndiGo quits the company's board of directors with immediate effect
— ANI (@ANI) February 18, 2022
ಫೆಬ್ರವರಿ 4 ರಂದು, ಇಂಡಿಗೋ ಮಂಡಳಿಯು ತಕ್ಷಣವೇ ಜಾರಿಗೆ ಬರುವಂತೆ ಅದರ ಸಹ-ಸಂಸ್ಥಾಪಕ ರಾಹುಲ್ ಭಾಟಿಯಾ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು ಸರ್ವಾನುಮತದಿಂದ ಅನುಮೋದನೆ ನೀಡಿದೆ. ಇಂಡಿಗೋ ಭಾಟಿಯಾ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅವಧಿಯಲ್ಲಿ ಕಂಪನಿಯಿಂದ ಯಾವುದೇ ಸಂಬಳವನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಭಾಟಿಯಾ ನಂತರ ತಮ್ಮ ಕಾರ್ಯಸೂಚಿಯು ಪರಿವರ್ತನೆಯಾಗಲಿದೆ ಮತ್ತು ಭಾರತದಲ್ಲಿ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಏರ್‌ಲೈನ್‌ನ ಉಪಸ್ಥಿತಿಯನ್ನು ವಿಸ್ತರಿಸಲು ಮತ್ತು ದೀರ್ಘಾವಧಿಗೆ ನಿರ್ಮಿಸಲು ಗಮನಹರಿಸುವುದಾಗಿ ಹೇಳಿದ್ದರು.