HEALTH TIPS

ಎಟಿಎಂ ರೂಪದಲ್ಲಿ ಪಡಿತರ ಚೀಟಿ; ಸ್ಮಾರ್ಟ್ ಕಾರ್ಡ್ ಪಡೆಯುವುದು ಹೇಗೆ? ಮಾಹಿತಿ ಹಂಚಿಕೊಂಡ ಸಚಿವರು

                                                        

                       ತಿರುವನಂತಪುರ: ಆಹಾರ ವಿತರಣಾ ವಲಯದಲ್ಲಿ ಸ್ಮಾರ್ಟ್ ಕಾರ್ಡ್ ಸಕ್ರಿಯಗೊಳಿಸುವ ಸಿದ್ಧತೆಯನ್ನು ರಾಜ್ಯ ಸರ್ಕಾರ ಚುರುಕುಗೊಳಿಸಿದೆ. ಅಕ್ಷಯ ಕೇಂದ್ರ-ನಾಗರಿಕ ಲಾಗಿನ್ ಮೂಲಕ ಸ್ಮಾರ್ಟ್ ಕಾರ್ಡ್‍ಗೆ ಅರ್ಜಿ ಸಲ್ಲಿಸಬಹುದು ಎಂದು ಶಿಕ್ಷಣ ಸಚಿವ ವಿ.ಶಿವಂÀಕುಟ್ಟಿ ತಿಳಿಸಿದ್ದಾರೆ. ಕಳೆದ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಇ-ರೇಷನ್ ಕಾರ್ಡ್ ಅನ್ನು ಮಾರ್ಪಡಿಸಿ ಸ್ಮಾರ್ಟ್ ಕಾರ್ಡ್‍ಗಳನ್ನು ತಯಾರಿಸಲಾಗುತ್ತಿದೆ. ಸ್ಮಾರ್ಟ್ ಕಾರ್ಡ್ ಬಿಡುಗಡೆಯೊಂದಿಗೆ ಪಡಿತರ ಅಂಗಡಿಗಳಲ್ಲಿ ಐಪೆÇೀಸ್ ಯಂತ್ರದ ಜೊತೆಗೆ ಕ್ಯೂಆರ್ ಕೋಡ್ ಸ್ಕ್ಯಾನರ್ ಕೂಡ ಇರಲಿದೆ ಎಂದು ಸಚಿವರು ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

                        ಪಡಿತರ ಚೀಟಿಗಳು ಸ್ಮಾರ್ಟ್ ಕಾರ್ಡ್ ಆಗಿದ್ದು, ಆಹಾರ ವಿತರಣೆ ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆಯಾಗಿದೆ ಎಂದರು. ಎಟಿಎಂ ಆಕಾರದ ಸ್ಮಾರ್ಟ್ ಕಾರ್ಡ್ ಕ್ಯೂಆರ್ ಕೋಡ್ ಮತ್ತು ಬಾರ್ ಕೋಡ್ ಅನ್ನು ಹೊಂದಿರುತ್ತದೆ. ಪಿವಿಸಿ ಪಡಿತರ ಚೀಟಿಯನ್ನು ಎಟಿಎಂ ಕಾರ್ಡ್‍ನ ಮಾದರಿ ಮತ್ತು ಗಾತ್ರಕ್ಕೆ ಪರಿವರ್ತಿಸಲಾಗಿದೆ ಮತ್ತು ಅದರ ನಿರ್ವಹಣೆ ಮತ್ತು ಶೇಖರಣೆಯಲ್ಲಿ ಅನುಕೂಲವಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಇ-ರೇಷನ್ ಕಾರ್ಡ್ ನ್ನು ಮಾರ್ಪಡಿಸಿ ಸ್ಮಾರ್ಟ್ ಕಾರ್ಡ್‍ಗಳನ್ನು ತಯಾರಿಸಲಾಗುತ್ತಿದೆ. ಸ್ಮಾರ್ಟ್ ಕಾರ್ಡ್ ಬಿಡುಗಡೆಯೊಂದಿಗೆ, ಅಂಗಡಿಗಳು ಇನ್ನು ಇಪೋಸ್  ಯಂತ್ರದೊಂದಿಗೆ ಕ್ಯೂಆರ್ ಕೋಡ್ ಸ್ಕ್ಯಾನರ್ ಅನ್ನು ಹೊಂದಿರುತ್ತದೆ. ಸ್ಕ್ಯಾನ್ ಮಾಡುವಾಗ ಮಾಹಿತಿಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಜೊತೆಗೆ ಫಲಾನುಭವಿಗಳ ಮೊಬೈಲ್‍ನಲ್ಲಿ ಪಡಿತರ ಖರೀದಿ ಮಾಹಿತಿ ಲಭ್ಯವಾಗಲಿದೆ ಎಂದರು.

                ನೂತನ ಪಡಿತರ ಚೀಟಿಯ ಮುಂಭಾಗದಲ್ಲಿ ಕಾರ್ಡ್‍ದಾರರ ಹೆಸರು, ಭಾವಚಿತ್ರ ಮತ್ತು ಬಾರ್‍ಕೋಡ್ ಇರುತ್ತದೆ ಎಂದು ಸಚಿವ ವಿ.ಶಿವಂಕುಟ್ಟಿ ಹೇಳಿದರು. ಮಾಸಿಕ ಆದಾಯ, ಪಡಿತರ ಅಂಗಡಿ ಸಂಖ್ಯೆ, ಮನೆ ವಿದ್ಯುದೀಕರಣ, ಎಲ್ ಪಿಜಿ ಸಂಪರ್ಕ ಇತ್ಯಾದಿಗಳು ಇದರ ಹಿಂದೆ ಇವೆ. ಸ್ಮಾರ್ಟ್ ಕಾರ್ಡ್‍ಗಳು ಅಸ್ತಿತ್ವದಲ್ಲಿರುವ ಎಲ್ಲಾ ಐದು ಬಣ್ಣಗಳಲ್ಲಿ ಲಭ್ಯವಿದೆ. ಪ್ರಸ್ತುತ ಪಡಿತರ ಚೀಟಿ ಮತ್ತು ಇ-ರೇಷನ್ ಕಾರ್ಡ್ ಬಳಕೆದಾರರು ಸ್ಮಾರ್ಟ್ ಕಾರ್ಡ್‍ಗೆ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ. ಅಕ್ಷಯ ಕೇಂದ್ರ / ನಾಗರಿಕ ಲಾಗಿನ್ ಮೂಲಕ ಸ್ಮಾರ್ಟ್ ಕಾರ್ಡ್‍ಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದರು.

                 ರಾಜ್ಯದಲ್ಲಿ 90.45 ಲಕ್ಷ ಪಡಿತರ ಚೀಟಿಗಳಿವೆ. ಅವರಲ್ಲಿ 12,98,997 ಮಂದಿ ತಮ್ಮ ಪಡಿತರ ಚೀಟಿಯನ್ನು ಪಿವಿಸಿ ಕಾರ್ಡ್‍ಗಳಾಗಿ ಪರಿವರ್ತಿಸಿದ್ದಾರೆ ಎಂದು ಶಿಕ್ಷಣ ಸಚಿವರು ಫೇಸ್‍ಬುಕ್ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ. ಸರ್ಕಾರದ ನೀತಿಯನ್ವಯ , ನೀವು ಯಾವುದೇ ಸಮಯದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು, ಹಳೆಯ ಕಾರ್ಡ್‍ನಲ್ಲಿನ ತಪ್ಪುಗಳನ್ನು ಸರಿಪಡಿಸಬಹುದು, ಸದಸ್ಯರ ಆಯ್ಕೆಯಿಂದ ಹೊರಗುಳಿಯಬಹುದು ಮತ್ತು ಹೊಸ ಸದಸ್ಯರನ್ನು ಸೇರಿಸಬಹುದು. ಎಲ್ಲರಿಗೂ ಪಡಿತರ ಚೀಟಿ ಜೊತೆಗೆ ಒಂದು ವರ್ಷದೊಳಗೆ ಸ್ಮಾರ್ಟ್ ಕಾರ್ಡ್ ಗುರಿ ಸಾಧಿಸುವ ಪಯಣದಲ್ಲಿದ್ದೇವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries