HEALTH TIPS

ಇಂದು ಕೇಂದ್ರ ಬಜೆಟ್: ಪ್ರಧಾನಿ ಭಾಷಣ ನೇರಪ್ರಸಾರ ವೀಕ್ಷಣೆಗೆ ಅವಕಾಶ

            ಕಾಸರಗೋಡು: ಕೇಂದ್ರ ಸರ್ಕಾರ 2022-23ನೇ ಸಾಲಿನ ಬಜೆಟ್ ಫೆ. 1ರಂದು ಮಂಡಿಸಲಿದ್ದು, ದೇಶವನ್ನು ಸ್ವಾಯತ್ತತೆಯೆಡೆಗೆ ಕೊಂಡೊಯ್ಯುವ ಬಜೆಟ್ ನಿರ್ದೇಶಗಳ ಬಗ್ಗೆ ಪ್ರಧಾನಮಂತ್ರಿ ಫೆ. 2ರಂದು ಬೆಳಗ್ಗೆ 10.30ಕ್ಕೆ ದೇಶದ ಜನತೆಯೊಂದಿಗೆ ಚರ್ಚಿಸಲಿದ್ದಾರೆ. ಆನ್‍ಲೈನ್ ಫ್ಲ್ಯಾಟ್‍ಫಾರ್ಮ್ ಮೂಲಕ ನಡೆಯುವ ಕಾರ್ಯಕ್ರಮದನ್ವಯ ವಿವಿಧ ಕೇಂದ್ರಗಳಲ್ಲಿ ಆಯೋಜಿಸುವ ಸಭಾಕಾರ್ಯಕ್ರಮಗಳಲ್ಲಿ ಜನರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆತ್ಮನಿರ್ಭರ ಬಜೆಟ್ ನಿರ್ದೇಶಗಳ ಕುರಿತಾಗಿ ಪ್ರಧಾನಿ ಮಾಡುವ ಭಾಷಣದ ನೇರ ಪ್ರಸಾರ ವೀಕ್ಷಣೆಗೆ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಫೆ. 2ರಂದು ಬೆಳಗ್ಗೆ 10.30ಕ್ಕೆ  ಕೋವಿಡ್ ಮಾನದಂಡ ಪಾಲಿಸಿಕೊಂಡು ಕಾರ್ಯಕ್ರಮ ಜರುಗಲಿರುವುದಾಗಿ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries