HEALTH TIPS

ಕರೊನಾ ನಿರ್ಮೂಲನೆ ಅಸಾಧ್ಯ; ಯೇಲ್ ವಿಶ್ವವಿದ್ಯಾಲಯದ ಅಧ್ಯಯನ ವರದಿ ಉಲ್ಲೇಖ!

      ನವದೆಹಲಿ: ಕರೊನಾ ಸೋಂಕು ತೊಲಗುವುದಿಲ್ಲ. ಇದು ಇನ್ನಿತರ ಸಾಮಾನ್ಯ ಸಾಂಕ್ರಾಮಿಕದಂತೆ ಶಾಶ್ವತವಾಗಿರುತ್ತದೆ. ಹೀಗಾಗಿ ಒಮಿಕ್ರಾನ್ ಪ್ರಭೇದವೇ ಕರೊನಾ ಕೊನೆಯ ರೂಪಾಂತರಿ ಎಂದು ಕೊಳ್ಳಬಾರದು. ಕರೊನಾಗೆ ಔಷಧ ಸಿದ್ಧವಾಗಿರುವುದರಿಂದ ಅದು ಲಘು ಪರಿಣಾಮಕಾರಿಯಾದ ಸಾಮಾನ್ಯ ಸೋಂಕಿನಂತೆ ಭವಿಷ್ಯದಲ್ಲಿ ಕಾಡುತ್ತಿರುತ್ತದೆ ಎಂದು ಅಧ್ಯಯನವೊಂದು ಅಭಿಪ್ರಾಯಟ್ಟಿದೆ.
     ಈಗ ಕಂಡು ಬರುತ್ತಿರುವ ಕರೊನಾ ಸೋಂಕು ಲಘು ಸ್ವರೂಪದ್ದಾಗಿದೆ. ಹೀಗಾಗಿ ಅನೇಕರು ಸೋಂಕಿನ ಅಂತ್ಯ ಸಮೀಪಿಸುತ್ತಿದೆ ಎಂದು ಮೈಮರೆಯುತ್ತಿದ್ದಾರೆ. ಆದರೆ, ಕರೊನಾ ಬೇರೆ ಬೇರೆ ವಿಧದಲ್ಲಿ ಕಾಣಿಸಿಕೊಳ್ಳುವ ಸಂಭವ ಇದೆ. ಆದ್ದರಿಂದ ಜನರು ಕರೊನಾ ಮುನ್ನೆಚ್ಚರಿಕೆ ಕ್ರಮಗಳ ಅನುಸರಣೆಯನ್ನು ನಿಲ್ಲಿಸಬಾರದು ಎಂದು ಯೇಲ್ ವಿಶ್ವವಿದ್ಯಾಲಯದ ಮೆಡಿಸಿನ್ ಪ್ರಾಧ್ಯಾಪಕಿ ಅಕಿಕೊ ಇವಾಸ್ಕಿ ಹೇಳಿದ್ದಾರೆ. ಬೂಸ್ಟರ್ ಡೋಸ್ ಪಡೆದುಕೊಂಡರೆ ಸೋಂಕು ತಗುಲುವುದಿಲ್ಲ ಎಂಬ ಉಡಾಫೆ ಬೇಡ. ಏಕೆಂದರೆ ಮೊದಲೆರಡು ಡೋಸ್​ಗಳನ್ನು ಪಡೆದವರಲ್ಲೂ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಆದ್ದರಿಂದ ಹೊಸ ತಳಿಗಳು ಪ್ರತಿಬಂಧಕಗಳನ್ನು ಮುರಿಯುವಷ್ಟು ಪ್ರಬಲತೆಯನ್ನು ಗಳಿಸಿಕೊಂಡೆ ಹುಟ್ಟಿಕೊಂಡಿರುತ್ತವೆ ಎಂದಿದ್ದಾರೆ.
     ಭಾರತದಲ್ಲಿ 34 ಸಾವಿರ ಹೊಸ ಕೇಸ್: ಸೋಮವಾರ 34,133 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,26,65,543ಕ್ಕೆ ಏರಿದೆ. 27 ದಿನಗಳ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ ಐದು ಲಕ್ಷಕ್ಕಿಂತ ಕೆಳಕ್ಕೆ ಇಳಿದ್ದು, ಎಂಟು ದಿನಗಳಿಂದ ಒಂದು ಲಕ್ಷಕ್ಕಿಂತ ಕಡಿಮೆ ಇದೆ.

       ಪ್ರತಿಕಾಯದಿಂದ ವೈರಾಣುಗೆ ತಡೆ: ಕರೊನಾ ಸೋಂಕು ಪ್ರಸರಣವನ್ನು ತಡೆಯುವಂತಹ ಹೊಸ ಪ್ರತಿಕಾಯವನ್ನು ಅಭಿವೃದ್ಧಿ ಪಡಿಸಿರುವುದಾಗಿ ಅಮೆರಿಕದ ಲಾಸ್ ಏಂಜಲೀಸ್​ನ ಸಂಶೋಧಕರು ಹೇಳಿಕೊಂಡಿದ್ದಾರೆ. ಸಾರ್ಸ್-ಕೋವ್-2 ವೈರಾಣು ಕೋಶದಿಂದ ಕೋಶಕ್ಕೆ ಹರಡುವ ಸರಪಳಿಯನ್ನು ಹತ್ತಿಕ್ಕುವ ಹೊಸ ಪ್ರತಿಕಾಯಕ್ಕೆ 'ಎಫ್​ಯುುಜಿ1' ಎಂದು ಹೆಸರಿಸಲಾಗಿದೆ. ಜೀವಕೋಶದಲ್ಲಿ ಸೋಂಕನ್ನು ಹೆಚ್ಚಿಸಲು ಕಾರಣವಾಗುವ ಕಿಣ್ವ ಫೂರಿನ್​ಗೆ 'ಎಫ್​ಯುುಜಿ1' ತಡೆಹಾಕುತ್ತದೆ ಎಂದು ಮೈಕ್ರೋಬಯಾಲಜಿಯ ಜರ್ನಲ್ ಸ್ಪೆಕ್ಟ್ರಂ ಜರ್ನಲ್ ಈ ಅಧ್ಯಯನ ವರದಿ ಮಾಡಿದೆ.

      ಹಾಂಕಾಂಗ್​ನಲ್ಲಿ 3 ವರ್ಷ ಮಕ್ಕಳಿಗೂ ಲಸಿಕೆ?

      ಹಾಂಕಾಂಗ್​ನಲ್ಲಿ 3 ವರ್ಷದ ಮಕ್ಕಳಿಗೂ ಲಸಿಕೆ ನೀಡಲು ಚಿಂತನೆ ನಡೆದಿದೆ. ಸೋಮವಾರ 1,347 ಹೊಸ ಪ್ರಕರಣಗಳು ವ್ಯಕ್ತವಾಗಿರುವ ಬೆನ್ನಿಗೆ ಸ್ವಯತ್ತ ಪ್ರದೇಶದ ಆಡಳಿತ ಈ ಚಿಂತನೆ ಮಾಡಿದೆ. ಒಮಿಕ್ರಾನ್ ಕಾಣಿಸಿಕೊಂಡ ನಂತರ ಸಭೆ, ಸಮಾರಂಭಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಮನೆಮಟ್ಟಿಗೆ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬಹುದು. ಆದರೆ, ಎರಡು ಕುಟುಂಬದಷ್ಟು ಜನರು ಮಾತ್ರ ಸೇರಬೇಕು ಎಂಬ ಮಿತಿಯನ್ನು ವಿಧಿಸಲಾಗಿದೆ. ಈ ನಿರ್ಬಂಧ ಜಾರಿಯಾದ ಮೇಲೆ ಆತಂಕ ಗೊಂಡ ಜನರು ದಿನಸಿ, ತರಕಾರಿ, ಮಾಂಸಾಹಾರಗಳನ್ನು ಹೆಚ್ಚು ಶೇಖರಿಸಿಕೊಳ್ಳುತ್ತಿದ್ದಾರೆ. ಹೇರ್ ಕಟಿಂಗ್​ಗೂ ನಿರ್ಬಂಧ ಆಗಬಹುದೆಂದು ಸಲೂನ್​ಗಳಿಗೆ ಮುಗಿಬೀಳುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries