ಪ್ರಯಾಗ್‌ರಾಜ್: ಕೋವಿಡ್ ಸಾಂಕ್ರಾಮಿಕದ ಆತಂಕದ ನಡುವೆಯೂ ಲಕ್ಷಾಂತರ ಭಕ್ತರು ಮಾಘ ಪೂರ್ಣಿಮೆ ಅಂಗವಾಗಿ ಇಲ್ಲಿನ ಗಂಗಾ ನದಿಯಲ್ಲಿ ಮಿಂದೆದ್ದರು.
ಮಾಘ ಪೂರ್ಣಿಮೆ: ಕೋವಿಡ್ ನಡುವೆಯೇ ಗಂಗಾ ನದಿಯಲ್ಲಿ ಲಕ್ಷಾಂತರ ಭಕ್ತರಿಂದ ಸ್ನಾನ
0
ಫೆಬ್ರವರಿ 16, 2022
Tags
ಪ್ರಯಾಗ್‌ರಾಜ್: ಕೋವಿಡ್ ಸಾಂಕ್ರಾಮಿಕದ ಆತಂಕದ ನಡುವೆಯೂ ಲಕ್ಷಾಂತರ ಭಕ್ತರು ಮಾಘ ಪೂರ್ಣಿಮೆ ಅಂಗವಾಗಿ ಇಲ್ಲಿನ ಗಂಗಾ ನದಿಯಲ್ಲಿ ಮಿಂದೆದ್ದರು.
ಮಾಘ ಮಾಸದ ಆಚರಣೆಗಾಗಿ ಭದ್ರತೆ ಹೆಚ್ಚಿಸಲಾಗಿದ್ದು, 150 ಸಿಸಿಟಿವಿ ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಮಿಶ್ರಾ ಹೇಳಿದ್ದಾರೆ.
ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಬೆಳಗ್ಗಿನಿಂದ ಸುಮಾರು 4.5 ಲಕ್ಷ ಮಂದಿ ಗಂಗಾ ನದಿ ಮತ್ತು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಪ್ರಯಾಗ್ ರಾಜ್‌ನ ಮೇಳ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಲವು ಅಗ್ನಿಶಾಮಕ ವಾಹನ, 108 ಮುಳುಗು ತಜ್ಞರನ್ನು ಸಹ ಸ್ಥಳಲ್ಲಿ ನಿಯೋಜಿಸಲಾಗಿದೆ.
ಮಂಗಳವಾರ ಮಧ್ಯರಾತ್ರಿಯಿಂದ ಗುರುವಾರ ರಾತ್ರಿ 10ರವರೆಗೆ ಸಂಗಮದಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ಎಸ್‌ಪಿ ನಾರಾಯಣ್ ಮಿಶ್ರಾ ತಿಳಿಸಿದ್ದಾರೆ.