ಕಾಸರಗೋಡು: ಕಳ್ಳಾರ್‍ನಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಮೂರು ವರ್ಷದ ಬಾಲಕಿಯನ್ನು ರಕ್ಷಿಸುವ ಮೂಲಕ ಬಾಲಕಿಯ ಅಜ್ಜಿ ಸಾಹಸ ಮೆರೆದಿದ್ದಾರೆ. ಇಲ್ಲಿನ ಅಡ್ಕ ನಿವಾಸಿ ಲೀಲಮ್ಮ(56)ಬಾವಿಗೆ ಧುಮುಕಿ ಬಾಲಕಿಯನ್ನು ರಕ್ಷಿಸಿದವರು.
ಶನಿವಾರ ಸಂಜೆ ಮೂರರ ಹರೆಯದ ಮೊಮ್ಮಗಳು, ಬಾವಿ ಸನಿಹ ಆಟವಾಡುತ್ತಿದ್ದ ಸಂದರ್ಭ ಆವರಣಗೋಡೆಯಿಂದ ಬಿದ್ದಿದ್ದಳು. ಇದನ್ನು ಕಂಡ ಲೀಲಮ್ಮ ತಕ್ಷಣ ಬಾವಿಗೆ ಧುಮುಕಿ, ಮಗುವನ್ನು ಎತ್ತಿ ಬಾವಿಯೊಳಗಿನ ಮೋಟಾರ್‍ಗೆ ಅಳವಡಿಸಿದ ಪೈಪಿನಲ್ಲಿ ಹಿಡಿದು ಸಾಹಸಕರ ರೀತಿಯಲ್ಲಿ ನಿಂತಿದ್ದಾರೆ. ತಕ್ಷಣ ಕುತ್ತಿಕೋಲ್‍ನಿಂದ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಅಜ್ಜಿ ಮತ್ತು ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಬಾವಿಯಲ್ಲಿ ಅಲ್ಪ ಪ್ರಮಾಣದ ನೀರಿದ್ದ ಕಾರಣ ಹೆಚ್ಚಿನ ಅಪಾಯ ಉಂಟಾಗಿರಲಿಲ್ಲ.
ನಡೆದದ್ದೇನು:
ಶುಕ್ರವಾರ ಮಧ್ಯಾಹ್ನ ಲೀಲಮ್ಮ ಅಜ್ಜಿ ತನ್ನ ಮೊಮ್ಮಗಳು ತಂಬೂರು (ರೇಚೆಲ್) ಜತೆ ಸಮೀಪದ ರಬ್ಬರ್ ತೋಟದ ನೆರಳಿಗೆ ಬಂದಿದ್ದರು. ಮೊಮ್ಮಗಳು ಕೈಕೈ ಹಿಡಿದುಕೊಂಡು ಹೋಗುತ್ತಿದ್ದಾಗ ಹತ್ತಿರದಲ್ಲಿದ್ದ ಬಾವಿಯತ್ತ ಬಗ್ಗಿ ನೋಡಿದಳು. ಆದರೆ ಎಡವಟ್ಟ|ಆಗಿ ತಂಬೂರು ಜಾರಿ ಸುಮಾರು 30 ಅಡಿ ಆಳದ ಬಾವಿಗೆ ಬಿದ್ದಿಳು.
ಇದಾದ ಬಳಿಕ ಅಜ್ಜಿ ಲೀಲಮ್ಮ ಜೋರಾಗಿ ಕಿರುಚಿಕೊಂಡು ಬಾವಿಗೆ ಹಾರಿದರು. ಲೀಲಮ್ಮ ಅವರು ನೆಗೆಯುವಾಗ ಬಾವಿಯ ಆಳ, ಎಷ್ಟು ನೀರಿತ್ತು ಎಂಬುದು ತಿಳಿದಿರಲಿಲ್ಲ ಎಂದು ಹೇಳುತ್ತಾರೆ. ಹಾರಿದಾಗ ಬಾಲಕಿ ನೀರಿನಲ್ಲಿ ಮುಳುಗೇಳುತ್ತಿದ್ದಳು. ಅವಳನ್ನು ಮೇಲೆತ್ತಿ ಮೋಟಾರಿನ ಪೈಪ್ ನ ಆಧಾರದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಇದ್ದೆ ಎನ್ನುತ್ತಾರೆ ಲೀಲಮ್ಮ.
ಲೀಲಮ್ಮನ ಕಿರುಚಾಟ ಕೇಳಿ ಪಕ್ಕದ ಮನೆಯ ಮಹಿಳೆ ಸ್ಥಳೀಯರಿಗೆ ಕರೆ ಮಾಡಿದರು. ಬಳಿಕ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ಮೇಲೆತ್ತಿ ರಕ್ಷಿಸಿದರು. ಮಗುವಿಗೆ ಬೇರೆ ಯಾವುದೇ ಅಪಾಯಗಳಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ತಂಬೂರು ಅವರ ತಾಯಿ ಜಿಸ್ಮಿ ಮಾತನಾಡಿ, ತಾಯಿಯ ಧೈರ್ಯ ಮತ್ತು ದೇವರ ಕಾಳಜಿಯೇ ಮಗಳ ಬದುಕನ್ನು ಮರಳಿ ತಂದಿದೆ. "ನನ್ನ ತಾಯಿಯ ನಿರ್ಧಾರ ಒಂದು ಕ್ಷಣ ತಡ ಮಾಡಿದ್ದರೆ, ನನ್ನ ಮಗಳು ಇಂದು ಜೀವಂತವಾಗಿರುತ್ತಿರಲಿಲ್ಲ" ಎಂದು ಅವರು ಗದ್ಗದಿತರಾದರು.