ತಿರುವನಂತಪುರ: ಹಿರಿಯ ಪತ್ರಕರ್ತ ಹಾಗೂ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹರಿ ಎಸ್ ಕರ್ತಾ ಅವರನ್ನು ಹೆಚ್ಚುವರಿ ಪಿಎ ಆಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನೇಮಕ ಮಾಡಿದ್ದಾರೆ. ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದೆ. ಹಾಲಿ ರಾಜ್ಯಪಾಲರ ಅವಧಿ ಮುಗಿಯುವವರೆಗೆ ನೇಮಕವಿರಲಿದೆ. ರಾಜ್ಯಪಾಲರ ಕಚೇರಿಯಲ್ಲಿ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.
ನೇಮಕಾತಿಗೆ ಸಂಬಂಧಿಸಿದ ಕಡತ ಜನವರಿ ಕೊನೆಯ ವಾರದಲ್ಲಿ ಸಚಿವಾಲಯಕ್ಕೆ ತಲುಪಿತ್ತು. ಕಳೆದ ವಾರ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡಿತ್ತು. ಅದೇ ದಿನ ಹರಿ ಎಸ್.ಕರ್ತಾ ಅವರು ರಾಜ್ಯಪಾಲರ ಕಚೇರಿಗೆ ತೆರಳಿ ಅಧಿಕಾರ ವಹಿಸಿದರು.
ಮಲೆಯಾಳ ದೈನಿಕ ಜನ್ಮಭೂಮಿಯ ಮಾಜಿ ಸಂಪಾದಕ ಹರಿ ಎಸ್ ಕರ್ತಾ ಕುಮ್ಮನಂ ರಾಜಶೇಖರನ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು 30 ವರ್ಷಗಳಿಂದ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಫೈನಾನ್ಶಿಯಲ್ ಎಕ್ಸ್‍ಪ್ರೆಸ್ ಮತ್ತು ಎಕನಾಮಿಕ್ ಟೈಮ್ಸ್‍ಗೆ ಬ್ಯೂರೋ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.