ಸಮರಸ ಚಿತ್ರಸುದ್ದಿ: ಬದಿಯಡ್ಕ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇರಳ ರಾಜ್ಯ ಘಟಕವು ನಡೆಸಿದ ರಾಜ್ಯಪುರಸ್ಕಾರ ಪರೀಕ್ಷೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸ್ಕೌಟ್ ವಿದ್ಯಾರ್ಥಿಗಳಾದ ಅರವಿಂದ ಕೃಷ್ಣ ಎಮ್, ಕಿಶನ್ ಎ, ರೋಹಿತ್ ಎ ಆರ್, ಸಂದೇಶ್ ಎನ್, ಸಾತ್ವಿಕ್ ಎ ಯಸ್, ತರುಣ್ ರೈ, ತೇಜಸ್ ಯಮ್ ಕೆ, ಉತ್ತಮ್ ಕೆ ಉತ್ತೀರ್ಣರಾಗಿ ರಾಜ್ಯಪುರಸ್ಕಾರ ಪಡೆದಿರುತ್ತಾರೆ. ಇವರನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.