HEALTH TIPS

ರೈತರಿಗೆ ಸೇವೆಯನ್ನು ಸುಲಭಗೊಳಿಸಲು ಇ-ಕಚೇರಿ: ಜಿಲ್ಲಾ ಕೃಷಿ ಕಚೇರಿಯಲ್ಲಿ ಇ-ಕಚೇರಿ ಉದ್ಘಾಟಿಸಿದ ಕೃಷಿ ಸಚಿವ ಪಿ.ಪ್ರಸಾದ್

                 

             ಕಾಸರಗೋಡು: ಕೃಷಿ ಕಛೇರಿಗಳಲ್ಲಿ ಇ-ಸಿಸ್ಟಂ ಅಳವಡಿಕೆಯಿಂದ ರೈತರಿಗೆ ಯಾವುದೇ ಅಡೆತಡೆಯಿಲ್ಲದೆ ಸೇವೆ ಲಭ್ಯವಾಗಲಿದೆ ಎಂದು ಕೃಷಿ ಸಚಿವ ಪಿ.ಪ್ರಸಾದ್ ಹೇಳಿದರು.

         ಜಿಲ್ಲಾ ಕೃಷಿ ಕಛೇರಿಯಲ್ಲಿ ಆನ್‍ಲೈನ್ ಇ-ಕಚೇರಿಯನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು.


         ಕಾಗದ ರಹಿತ ಕಚೇರಿಯಾಗುವ ಮೂಲಕ ರೈತರು ಕೇರಳ-ಕೇಂದ್ರ ಯೋಜನೆಗಳ ಲಾಭವನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಅದರಿಂದಾಗುವ ನೈಸರ್ಗಿಕ ವಿಕೋಪಗಳನ್ನು ಹೋಗಲಾಡಿಸುವಲ್ಲಿ ನಾವು ಮುಂದಾಳತ್ವ ವಹಿಸಬೇಕು. ಸರ್ಕಾರಿ ಕಚೇರಿಗಳು ಇ-ಸಿಸ್ಟಮ್ ಮೂಲಕ ಕಾರ್ಬನ್ ನ್ಯೂಟ್ರಲ್ ಪರಿಕಲ್ಪನೆಗೆ ಕೊಡುಗೆ ನೀಡಬಹುದು. ವೈಜ್ಞಾನಿಕ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು ಎಂದರು.

          ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು. ಮೊದಲ ಕಡತವನ್ನು ಜಿಲ್ಲಾಧಿಕಾರಿಗಳು ಇ-ಸಿಸ್ಟಂ ಮೂಲಕ ಕೃಷಿ ಇಲಾಖೆ ನಿರ್ದೇಶಕರಿಗೆ ಕಳುಹಿಸಿದ್ದಾರೆ. ಜಿಲ್ಲಾ ಕೃಷಿ ಕಛೇರಿ ಇ ವ್ಯವಸ್ಥೆಗೆ ತೆರೆದುಕೊಂಡಿರುವುದು ಸಕಾರಾತ್ಮಕ ಬದಲಾವಣೆಗೆ ನಾಂದಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ಸ್ವಾಗತಿಸಿ, ಲೆಕ್ಕಾಧಿಕಾರಿ ಟಿ.ವಿ.ಗೋಪಿ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries